ಯಶ್-ರಾಧಿಕಾ ಪುತ್ರನ ಆಗಮನ ಸುದ್ದಿ ಕೇಳಿ ಅಂಬರೀಶಣ್ಣನೇ ಹುಟ್ಟಿಬಂದ್ರು ಎಂದ ಅಭಿಮಾನಿಗಳು

ಬೆಂಗಳೂರು| Krishnaveni K| Last Modified ಗುರುವಾರ, 31 ಅಕ್ಟೋಬರ್ 2019 (09:14 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಮತ್ತೊಂದು ಮಗುವಾದ ಸುದ್ದಿ ತಿಳಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಷಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

 
ಈ ನಡುವೆ ರಾಕಿಂಗ್ ಜೋಡಿಗೆ ಎರಡನೇ ಮಗು ಗಂಡು ಮಗುವಾಗಿರುವ ಸುದ್ದಿ ತಿಳಿದ ಅಭಿಮಾನಿಗಳು ರೆಬಲ್ ಸ್ಟಾರ್ ಅಂಬರೀಶ್ ಮತ್ತೆ ಹುಟ್ಟಿ ಬಂದ್ರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
 
ಯಶ್ ಮತ್ತು ರಾಧಿಕಾರನ್ನು ತಮ್ಮ ಮಕ್ಕಳಂತೇ ಕಾಣುತ್ತಿದ್ದ ಅಂಬಿ, ಈ ದಂಪತಿ ಮೊದಲ ಮಗುವಿಗೆಂದೇ ತೊಟ್ಟಿಲೊಂದನ್ನು ಉಡುಗೊರೆಯಾಗಿ ನೀಡಲು ಬಯಸಿದ್ದರು. ಆದರೆ ಮೊದಲ ಮಗುವನ್ನು ನೋಡುವ ಮೊದಲೇ ಅಂಬರೀಶ್ ಇಹಲೋಕ ತ್ಯಜಿಸಿದ್ದರು. ಇದೀಗ ಎರಡನೇ ಮಗು ಗಂಡು ಮಗುವಾಗಿರುವುದರಿಂದ ಅಭಿಮಾನಿಗಳು ಇದು ಅಂಬರೀಶ್ ಅವರ ಪುನರಾಗಮನ ಎಂದೇ ಬಣ್ಣಿಸುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :