ಮುಂಬೈ|
Jagadeesh|
Last Modified ಬುಧವಾರ, 14 ಅಕ್ಟೋಬರ್ 2020 (22:04 IST)
ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಹಳೆಯ ಆಕಾರಕ್ಕೆ ಮರಳಬೇಕಿದೆ ಎಂದು ಹೇಳಿದ್ದಾರೆ.
ಅರೇ ಅವರ ಆಕಾರಕ್ಕೆ ಏನಾಗಿದೆ ಎಂದು ಪ್ರಶ್ನಿಸಬೇಡಿ. ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟಿ ಜಯಲಲಿತಾ ಅವರ ಜೀವನ ಆಧರಿಸಿದ ಸಿನಿಮಾ ತಲೈವಿಗಾಗಿ ನಟಿ ಕಂಗನಾ ಬರೋಬ್ಬರಿ 20 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಾರಂತೆ.
ತಲೈವಿ ಸಿನಿಮಾ ಶೂಟಿಂಗ್ ಅಂತಿಮ ಘಟ್ಟದಲ್ಲಿದೆ. ಹೀಗಾಗಿ ತಲೈವಿ ಸಿನಿಮಾ ಪೂರ್ಣಗೊಳ್ಳುತ್ತಿರುವುದರಿಂದಾಗಿ ತಮ್ಮ ಹಳೆಯ ಆಕಾರಕ್ಕೆ ವಾಪಸ್ ಆಗಲು ಬಯಸಿರುವುದಾಗಿ ನಟಿ ಕಂಗನಾ ಹೇಳಿದ್ದಾರೆ.