ಮಾಸ್ಟರ್ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು ಡೌಟ್ ?

ಚೆನ್ನೈ| pavithra| Last Updated: ಸೋಮವಾರ, 11 ಜನವರಿ 2021 (20:07 IST)
ಚೆನ್ನೈ : ನಟ ವಿಜಯ್ ಅಭಿನಯದ ಬಹುನಿರೀಕ್ಷೆಯ ಚಿತ್ರ ಮಾಸ್ಟರ್ ಜನವರಿ 13ರಂದು ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಆದರೆ ಈ ನಡುವೆ ಇದೀಗ ಚಿತ್ರ ಬಿಡುಗಡೆಯಾಗುತ್ತಾ ಎಂಬ ಅನುಮಾನ ಶುರುವಾಗಿದೆ.

ಹೌದು. ಇದಕ್ಕೆ ಕಾರಣವೇನೆಂದರೆ  ಈ ಹಿಂದೆ ಕೊರೊನಾ ಕಾರಣದಿಂದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲು ಸಾಧ್ಯವಾಗದ ಕಾರಣ ಚಿತ್ರದ ಬಿಡುಗಡೆ ಮುಂದೂಡಲಾಗಿತ್ತು. ಆದರೆ ಜನವರಿ 13ಕ್ಕೆ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಸಂಗ್ರಹ ಹೆಚ್ಚಿಸುವ ಕಾರಣ ಚಿತ್ರಮಂದಿರದಲ್ಲಿ 100% ಸೀಟುಗಳನ್ನು ನೀಡುವಂತೆ ಸರ್ಕಾರದ ಬಳಿ ಮನವಿ ಮಾಡಲಾಗಿತ್ತು. ಅದರಂತೆ 100% ಸೀಟುಗಳನ್ನು ಹಾಕಲು ಅನುಮತಿ ಸಿಕ್ಕಿತ್ತು.

ಆದರೆ ಇದೀಗ ಕೇಂದ್ರ ಸರ್ಕಾರ 100% ಸೀಟುಗಳನ್ನು ರದ್ದುಪಡಿಸಿದೆ. ಮತ್ತು ಹಾಗೇ ಚಿತ್ರಮಂದಿರದಲ್ಲಿ ಯಾವುದೇ ಗದ್ದಲ, ಗಲಾಟೆ ನಡೆಯದಂತೆ ಶಾಂತವಾಗಿರಬೇಕೆಂದು ಹೈಕೋರ್ಟ್ ಸೂಚಿಸಿದೆ, ಹಾಗಾಗಿ ಈ ಎಲ್ಲಾ ಸಮಸ್ಯೆಗಳ ನಡುವೆ ಮಾಸ್ಟರ್ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು ಡೌಟ್ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :