ಪರಭಾಷೆಯಲ್ಲಿ ಬಿಡುಗಡೆಯಾಗಲು ತಯಾರಾಗಿ ನಿಂತ ಕನ್ನಡ ಸಿನಿಮಾಗಳು

ಬೆಂಗಳೂರು| Krishnaveni K| Last Modified ಸೋಮವಾರ, 18 ಜನವರಿ 2021 (08:20 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಬೇರೆ ಭಾಷೆಗಳಲ್ಲೂ ಹೆಸರು ಮಾಡುತ್ತಿದ್ದಂತೇ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ.
 

ಇತ್ತೀಚೆಗೆ ಘೋಷಣೆಯಾಗುತ್ತಿರುವ ಹೆಚ್ಚಿನ ಸಿನಿಮಾಗಳೂ ಬೇರೆ ಭಾಷೆಯಲ್ಲೂ ಬಿಡುಗಡೆಯಾಗುತ್ತಿವೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ, ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ, ಶ್ರೀಮುರಳಿ ಅಭಿನಯದ ‘ಮದಗಜ’, ಧ್ರುವ ಸರ್ಜಾರ ‘ಪೊಗರು’ ಈ ಪಟ್ಟಿಯಲ್ಲಿ ಪ್ರಮುಖ ಸಿನಿಮಾಗಳು. ಅದಲ್ಲದೆ, ಹಲವು ಹೊಸ ಹೊಸ ಸಿನಿಮಾಗಳೂ ಈಗ ಬೇರೆ ಭಾಷೆಯಲ್ಲೂ ಮಾರುಕಟ್ಟೆ ಹುಡುಕುತ್ತಿವೆ. ಆ ಮಟ್ಟಿಗೆ ಕನ್ನಡ ಸಿನಿಮಾಗಳು ಈಗ ಬೇರೆ ಭಾಷೆಯನ್ನೂ ತಲುಪುವಷ್ಟು ಬೆಳೆದಿದೆ.
ಇದರಲ್ಲಿ ಇನ್ನಷ್ಟು ಓದಿ :