ಕೆಜಿಎಫ್ 2 ಟೀಸರ್ ನಲ್ಲಿ ಇವರೊಬ್ಬರನ್ನು ಮಿಸ್ ಮಾಡಿಕೊಳ್ತಿದ್ದಾರೆ ಫ್ಯಾನ್ಸ್!

ಬೆಂಗಳೂರು| Krishnaveni K| Last Modified ಸೋಮವಾರ, 11 ಜನವರಿ 2021 (08:50 IST)
ಬೆಂಗಳೂರು: ಮೊನ್ನೆಯಷ್ಟೇ ಬಿಡುಗಡೆಯಾದ ಟೀಸರ್ ಭರ್ಜರಿ ಪ್ರತಿಕ್ರಿಯೆ ಪಡೆದು ದಾಖಲೆಯನ್ನೇ ಮಾಡಿದೆ. ಹಾಗಿದ್ದರೂ ಅಭಿಮಾನಿಗಳು ಈ ಟೀಸರ್ ನಲ್ಲಿ ಒಬ್ಬರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
 

ಅವರು ಬೇರೆ ಯಾರೂ ಅಲ್ಲ, ಹಿರಿಯ ನಟ ಅನಂತ್ ನಾಗ್. ಕೆಜಿಎಫ್ 1 ನಲ್ಲಿ ಅನಂತ್ ನಾಗ್ ಅವರ ಪಾತ್ರ, ಧ್ವನಿ, ಡೈಲಾಗ್ ಎಲ್ಲರಿಗೂ ಭಾರೀ ಇಷ್ಟವಾಗಿತ್ತು. ಅದೊಂಥರಾ ಟ್ರೇಡ್ ಮಾರ್ಕ್ ಆಗಿತ್ತು. ಆದರೆ ಈ ಟೀಸರ್ ನಲ್ಲೂ ಅವರ ಧ‍್ವನಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಅದನ್ನೊಂದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ‘ಪವರ್ ಫುಲ್ ಪೀಪಲ್ ಫ್ರಂ ಪವರ್ ಫುಲ್ ಪ್ಲೇಸಸ್’ ಎಂದು ಅನಂತ್ ಧ್ವನಿಯಲ್ಲಿ ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :