Widgets Magazine

ಫ್ಯಾಂಟಮ್ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Modified ಭಾನುವಾರ, 22 ನವೆಂಬರ್ 2020 (09:30 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಈ ಬಗ್ಗೆ ಕಿಚ್ಚ ಸುದೀಪ್ ಮಾಹಿತಿ ನೀಡಿದ್ದಾರೆ.

 
ಲಾಕ್ ಡೌನ್ ಬಳಿಕ ಚಿತ್ರೀಕರಣ ಆರಂಭಿಸಿದ್ದ ಚಿತ್ರತಂಡ ಹೈದರಾಬಾದ್ ನಲ್ಲಿ ವಿಶೇಷ ಸೆಟ್ ನಿರ್ಮಿಸಿ ಶೂಟಿಂಗ್ ನಡೆಸುತ್ತಿತ್ತು. ಇದೀಗ ಕೊನೆಗೂ ಸುದೀರ್ಘ ಕಾಲದ ಶೂಟಿಂಗ್ ಒಂದು ಹಂತ ಮುಗಿದಿದೆ. ಎಲ್ಲವೂ ಅಂದುಕೊಂಡ ಯೋಜನೆ ‍ಪ್ರಕಾರವೇ ಮುಗಿದಿದೆ ಎನ್ನುವುದು ಸಂತೋಷ. ಶೂಟಿಂಗ್ ಬಗ್ಗೆ ಯಾರೂ ಯೋಚನೆಯೂ ಮಾಡದ ಸಮಯದಲ್ಲಿ ಶೂಟಿಂಗ್ ಮಾಡಿದ್ದೆವು. ಇದೀಗ ಕೊನೆಯ ಹಂತದ ಚಿತ್ರೀಕರಣ ಮಾತ್ರ ಬಾಕಿಯಿದೆ ಎಂದು ಸುದೀಪ್ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :