ಸಾಹಸ ಕಲಾವಿದರ ಸಂಘಕ್ಕೆ ಕಿಚ್ಚ ಸುದೀಪ್ ನೀಡಿದ ದೇಣಿಗೆ ಹಣವೆಷ್ಟು ಗೊತ್ತೇ?!

ಬೆಂಗಳೂರು| Krishnaveni K| Last Modified ಬುಧವಾರ, 6 ನವೆಂಬರ್ 2019 (10:02 IST)
ಬೆಂಗಳೂರು: ಸಿನಿಮಾ ರಂಗದಲ್ಲಿ ಯಾರೇ ಕಷ್ಟ ಎಂದು ಬಂದರೆ ಸಹಾಯ ಮಾಡುವವರಲ್ಲಿ ಮೊದಲಿಗರು ಎಂದರೆ ಕಿಚ್ಚ ಸುದೀಪ್. ಇದೀಗ ಸಾಹಸ ಕಲಾವಿದರ ಸಂಘಕ್ಕೆ ಕಿಚ್ಚ ಭರ್ಜರಿ ದೇಣಿಗೆ ನೀಡಿದ್ದಾರೆ.

 
ಕೆಲವೇ ಸಮಯದ ಹಿಂದೆ ಸಾಹಸ ಕಲಾವಿದರ ಸಂಘ ಅಸ್ಥಿತ್ವಕ್ಕೆ ಬಂದಿತ್ತು. ಈ ಸಂಘಕ್ಕೆ ಕಿಚ್ಚ ಸುದೀಪ್ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ವಿಚಾರವನ್ನು ಸಾಹಸ ನಿರ್ದೇಶಕ ರವಿವರ್ಮ ಟ್ವಿಟರ್ ಮೂಲಕ ತಿಳಿಸಿದ್ದು, ಕಿಚ್ಚನಿಗೆ ಧನ್ಯವಾದ ಸಲ್ಲಿಸಿದ್ದಾರೆ.
 
ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ನಿಮ್ಮಂತಹ ಸಾಹಸ ಕಲಾವಿದರಿಂದಾಗಿಯೇ ನನ್ನಂತಹವರು ತೆರೆ ಮೇಲೆ ಹೀರೋ ಆಗಿ ವಿಜೃಂಭಿಸುತ್ತಿದ್ದೇವೆ ಎಂದಿದ್ದಾರೆ. ಕಿಚ್ಚನ ಉದಾರ ಹೃದಯಕ್ಕೆ ಅಭಿಮಾನಿಗಳಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :