Widgets Magazine

ಕುರಿ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿರುವಾಗ ಕಿಚ್ಚ ಸುದೀಪ್ ಮಾಡಿದ್ದೇನು ಗೊತ್ತಾ?!

ಬೆಂಗಳೂರು| Krishnaveni K| Last Modified ಬುಧವಾರ, 27 ನವೆಂಬರ್ 2019 (09:31 IST)
ಬೆಂಗಳೂರು: ಕುರಿ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿರುವಾಗ ಹೊರಗಡೆ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದರ ಅರಿವು ಅವರಿಗಿಲ್ಲ. ಅವರು ನಟಿಸಿರುವ ಮನೆ ಮಾರಾಟಕ್ಕಿದೆ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿರುವ ವಿಚಾರ ಬಹುಶಃ ಅವರಿಗೆ ತಿಳಿದಿರುವುದಿಲ್ಲ.

 
ಆದರೆ ಈ ನಡುವೆ ಕಿಚ್ಚ ಸುದೀಪ್ ಮಾಡಿದ್ದೇನು ಗೊತ್ತಾ? ಸದಾ ಹೊಸಬರ ಸಿನಿಮಾಗಳನ್ನು ಪ್ರೋತ್ಸಾಹಿಸುವ ಕಿಚ್ಚ ಸುದೀಪ್ ಸಾಧು ಕೋಕಿಲ, ರವಿಶಂಕರ್ ಗೌಡ, ಚಿಕ್ಕಣ್ಣ ಹಾಗೂ ಕುರಿ ಪ್ರತಾಪ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಮನೆ ಮಾರಾಟಕ್ಕಿದೆ ಎಂಬ ಹಾಸ್ಯಮಯ ಸಿನಿಮಾ ವೀಕ್ಷಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 
ಚಿತ್ರತಂಡ ಕಿಚ್ಚ ಸುದೀಪ್ ಗಾಗಿಯೇ ವಿಶೇಷ ಪ್ರದರ್ಶನ ಏರ್ಪಡಿಸಿತ್ತು. ಚಿತ್ರ ವೀಕ್ಷಿಸಿದ ಬಳಿಕ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ಬರೆದುಕೊಂಡಿರುವ ಕಿಚ್ಚ ಸಿನಿಮಾ ಇಷ್ಟವಾಯಿತು. ಭೂತದ ಹೆಸರು ಹೇಳಿಕೊಂಡು ಹೆದರಿಸುವ ಐಡಿಯಾ ನನಗೆ ಹೊಸತು. ಸಾಧು, ಚಿಕ್ಕಣ್ಣ, ರವಿಶಂಕರ್, ಕುರಿ ಪ್ರತಾಪ್ ಉತ್ತಮ ಅಭಿನಯ ನೀಡಿದ್ದಾರೆ. ಇನ್ನು, ಶ್ರುತಿ ಹರಿಹರನ್ ಅವರನ್ನು ತೆರೆ ಮೇಲೆ ನೋಡಲು ಇಷ್ಟವಾಗುತ್ತದೆ. ಇಂತಹ ಶೋ ಆಯೋಜಿಸಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದಗಳು ಎಂದು ಕಿಚ್ಚ ಸಿನಿಮಾ ಬಗ್ಗೆ ಹೊಗಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :