ಕಿಚ್ಚ ಸುದೀಪ್ ಹೆಸರಿನ ಗ್ರಂಥಾಲಯ ಕೊನೆಗೂ ಉದ್ಘಾಟನೆ

ಬೆಂಗಳೂರು| Krishnaveni K| Last Modified ಭಾನುವಾರ, 29 ಸೆಪ್ಟಂಬರ್ 2019 (08:38 IST)
ಬೆಂಗಳೂರು: ತಮ್ಮ ಮೆಚ್ಚಿನ ನಟನ ಮೇಲಿನ ಪ್ರೀತಿಯನ್ನು ಅಭಿಮಾನಿಗಳು ಯಾವುದೋ ಯಾವುದೋ ರೀತಿಯಲ್ಲಿ ಪ್ರದರ್ಶಿಸುತ್ತಾರೆ. ಆದರೆ ಕಿಚ್ಚ ಸುದೀಪ್ ಅಭಿಮಾನಿಗಳು ಗ್ರಂಥಾಲಯ ತೆರೆದು ಅಭಿಮಾನ ಮೆರೆದಿದ್ದಾರೆ.

 
ಬೊಂಬೇರಹಳ್ಳಿಯಲ್ಲಿ ಅಭಿಮಾನಿಯೊಬ್ಬ ಕಿಚ್ಚ ಸುದೀಪ್ ಹೆಸರಿನಲ್ಲಿ ಗ್ರಂಥಾಲಯವೊಂದನ್ನು ನಿರ್ಮಿಸಿದ್ದ. ಇದನ್ನು ನೋಡಿ ಸ್ವತಃ ಕಿಚ್ಚ ಸುದೀಪ್ ಆ ಅಭಿಮಾನಿಯ ಕೆಲಸವನ್ನು ಮೆಚ್ಚಿಕೊಂಡಿದ್ದರು.
 
ಇದೀಗ ಆ ಗ್ರಂಥಾಲಯಕ್ಕೆ ಉದ್ಘಾಟನೆಯ ಭಾಗ್ಯ ದೊರೆತಿದೆ. ಭರ್ಜರಿಯಾಗಿ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮ ನಡೆದಿದ್ದು, ಸ್ವತಃ ಕಿಚ್ಚ ಈ ಅಭಿಮಾನಕ್ಕೆ ನನಗೆ ಮಾತೇ ಹೊರಡುತ್ತಿಲ್ಲ ಎಂದು ಧನ್ಯವಾದ ಅರ್ಪಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :