ತಾವೇ ನಿರ್ದೇಶಿಸುತ್ತಿರುವ ಸಿನಿಮಾ ಬಗ್ಗೆ ಸ್ಪಷ್ಟನೆ ಕೊಟ್ಟ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Modified ಮಂಗಳವಾರ, 19 ನವೆಂಬರ್ 2019 (09:13 IST)
ಬೆಂಗಳೂರು: ಕೋಟಿಗೊಬ್ಬ 3 ಸಿನಿಮಾ ಬಳಿಕ ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಆ ಸಿನಿಮಾ ಕುರಿತಾಗಿ ಈಗ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ.

 
ಮುಂದಿನ ವರ್ಷ ಸುದೀಪ್, ಅನೂಪ್ ಭಂಡಾರಿ ನಿರ್ದೇಶನದಲ್ಲಿ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅದಾದ ಬಳಿಕ ಕಿಚ್ಚ ತಮ್ಮದೇ ನಿರ್ದೇಶನದ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆ ಮೂಲಕ ಬಹಳ ದಿನಗಳ ನಂತರ ಕಿಚ್ಚ ಆಕ್ಷನ್ ಕಟ್ ಗೆ ಮರಳಲಿದ್ದಾರೆ.
 
ಈ ಸಿನಿಮಾ ರಿಮೇಕ್ ಆಗಿರಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅದಕ್ಕೀಗ ಕಿಚ್ಚ ಸ್ಪಷ್ಟನೆ ಕೊಟ್ಟಿದ್ದು, ಇದು ರಿಮೇಕ್ ಸಿನಿಮಾವಾಗಿರುವುದಿಲ್ಲ. ಪಕ್ಕಾ ಸ್ವಮೇಕ್ ಸಿನಿಮಾಗಿರಲಿದೆ. ಸದ್ಯದಲ್ಲೇ ಇದು ಸೆಟ್ಟೇರುವ ನಿರೀಕ್ಷೆಯಿದೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :