ಹೀರೋ ಕಿಚ್ಚ ಸುದೀಪ್ ವಿಲನ್ ಪಾತ್ರ ಮಾಡುವುದೇಕೆ? ಕಿಚ್ಚನೇ ಹೇಳ್ತಾರೆ ನೋಡಿ!

ಬೆಂಗಳೂರು| Krishnaveni K| Last Modified ಶನಿವಾರ, 21 ಡಿಸೆಂಬರ್ 2019 (09:50 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಅಭಿನಯ ಚಕ್ರವರ್ತಿ ಎಂದೇ ಕರೆಯಿಸಿಕೊಳ್ಳುವ ಕಿಚ್ಚ ಸುದೀಪ್ ಬೇರೆ ಭಾಷೆಗಳಲ್ಲಿ ವಿಲನ್ ಆಗಿಯೂ ಪಾತ್ರ ಮಾಡಲು ಹಿಂದೆ ಮುಂದೆ ನೋಡಲ್ಲ. ‘ಈಗ’ ಸಿನಿಮಾದಿಂದ ಹಿಡಿದು ನಿನ್ನೆಯಷ್ಟೇ ಬಿಡುಗಡೆಯಾದ ಯಲ್ಲೂ ಕಿಚ್ಚ ವಿಲನ್ ಆಗಿಯೂ ಗುರುತಿಸಿಕೊಳ್ಳುವಂತಹ ಪಾತ್ರ ಮಾಡಿದ್ದಾರೆ.
 
ಸಾಮಾನ್ಯವಾಗಿ ಹೀರೋ ಆದವರು ವಿಲನ್ ಪಾತ್ರ ಮಾಡಲು ಹಿಂಜರಿಯುತ್ತಾರೆ. ಆದರೆ ಕಿಚ್ಚ ಮಾತ್ರ ಉತ್ತಮ ಪಾತ್ರವೆಂದರೆ ವಿಲನ್ ರೋಲ್ ಮಾಡಲೂ ಹಿಂದೆ ಮುಂದೆ ನೋಡಲ್ಲ. ದಬಾಂಗ್ 3 ಯಲ್ಲಿ ಕಿಚ್ಚನ ಬಲ್ಲಿ ಸಿಂಗ್ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾದ ಬಳಿಕ ಇದರ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

 
‘ಒಂದೇ ರೀತಿಯ ಹೀರೋ ಪಾತ್ರಕ್ಕೆ ಅಂಟಿಕೊಳ್ಳದೇ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸುವುದು, ಇದುವೇ ನನ್ನನ್ನು ಒಬ್ಬ ನಟನಾಗಿ ಗುರುತಿಸುವಂತೆ ಮಾಡಿರುವುದು ಮತ್ತು ಅದನ್ನು ನಾನು ಇನ್ನು ಮುಂದೆಯೂ ಮಾಡುತ್ತೇನೆ. ದಬಾಂಗ್ 3 ಯಲ್ಲಿ ನನ್ನ ಪಾತ್ರದ ಬಗ್ಗೆ ಸಿಗುತ್ತಿರುವ ಮೆಚ್ಚುಗೆಯೂ ಇದೇ ನಿರ್ಧಾರದ ಫಲ. ನನ್ನ ಬಲ್ಲಿಸಿಂಗ್ ಪಾತ್ರವನ್ನು ಮೆಚ್ಚಿಕೊಂಡ ಎಲ್ಲರಿಗೂ ಧನ್ಯವಾದಗಳು’ ಎಂದು ಕಿಚ್ಚ ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :