Widgets Magazine

ಅರ್ಧಶತಕ ಹೊಡೆದ ಪೈಲ್ವಾನ್: ಕಿಚ್ಚ ಸುದೀಪ್ ಭಾವುಕ ನುಡಿ

ಬೆಂಗಳೂರು| Krishnaveni K| Last Modified ಶುಕ್ರವಾರ, 1 ನವೆಂಬರ್ 2019 (08:40 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದೆ. ಈ ವೇಳೆ ಕಿಚ್ಚ ಸುದೀಪ್ ಚಿತ್ರತಂಡ ಮತ್ತು ಅಭಿಮಾನಿಗಳಿಗೆ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

 
ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಭಾರೀ ಯಶಸ್ಸು ಕಂಡಿತ್ತು. ಕಿಚ್ಚ ಸುದೀಪ್ ಶರ್ಟ್ ಲೆಸ್ ಆಗಿ ಪರಿಶ್ರಮಪಟ್ಟು ಮಾಡಿದ ಸಿನಿಮಾವಿದು. ಹೀಗಾಗಿ ಇದು ತಮ್ಮ ಸಿನಿ ಕೆರಿಯರ್ ನಲ್ಲೇ ಡಿಫರೆಂಟ್ ಸಿನಿಮಾ ಎಂದು ಕಿಚ್ಚ ಆಗಾಗ ಹೇಳುತ್ತಿರುತ್ತಾರೆ.
 
ಇದೀಗ 50 ದಿನ ಪೂರೈಸಿರುವುದಕ್ಕೆ ಟ್ವೀಟ್ ಮಾಡಿರುವ ಕಿಚ್ಚ ‘ಇಡೀ ಪೈಲ್ವಾನ್ ತಂಡ ಈ ಯಶಸ್ಸಿಗೆ ಕಾರಣ. ಈ ಸಿನಿಮಾ ಯಾವತ್ತಿಗೂ ನನಗೆ ಆಪ್ತವಾಗಿರುತ್ತದೆ. ನನಗೆ ಎಂದೂ ಮರೆಯದ ನೆನಪು ಕೊಟ್ಟ ಸಿನಿಮಾವಿದು. ಪ್ರತೀ ಸೆಕೆಂಡ್ ಕೂಡಾ ನಾನು ಎಂಜಾಯ್ ಮಾಡಿದ್ದೆ. ನಿರ್ದೇಶಕ ಕೃಷ್ಣ ಮತ್ತು ಸ್ವಪ್ನ ಕೃಷ್ಣಗೆ ವಿಶೇಷ ಧನ್ಯವಾದಗಳು. ನನ್ನೆಲ್ಲಾ ಸ್ನೇಹಿತರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :