Widgets Magazine

ಲವ್ ಮಾಕ್ ಟೈಲ್ ಎರಡನೇ ಸೀಕ್ವೆಲ್ ಗೆ ಸೀನ್ ರೆಡಿ

ಬೆಂಗಳೂರು| Krishnaveni K| Last Modified ಮಂಗಳವಾರ, 24 ಮಾರ್ಚ್ 2020 (09:29 IST)
ಬೆಂಗಳೂರು: ನಿರ್ದೇಶಕರಾಗಿ, ನಟರಾಗಿ ಅಭಿನಯಿಸಿದ್ದ ‘ಲವ್ ಮಾಕ್ ಟೈಲ್’ ಸಿನಿಮಾ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಜನಪ್ರಿಯತೆಯಿಂದಾಗಿ ಕೃಷ್ಣ ಈಗ ಲವ್ ಮಾಕ್ ಟೈಲ್ ಎರಡನೇ ಭಾಗಕ್ಕೆ ಸಿದ್ಧತೆ ಆರಂಭಿಸಿದ್ದಾರೆ.

 
ಕೊರೋನಾದಿಂದಾಗಿ ಸದ್ಯಕ್ಕೆ ಚಿತ್ರರಂಗವೂ ಸ್ತಬ್ಧವಾಗಿದೆ. ಈ ನಡುವೆ ಕೃಷ್ಣ ಎರಡನೇ ಭಾಗಕ್ಕೆ ಸ್ಕ್ರಿಪ್ಟ್ ರೆಡಿ ಮಾಡಿಕೊಳ‍್ಳುತ್ತಿದ್ದಾರೆ.
 
ಕೃಷ್ಣ ಬರೆದಿರುವ ಎರಡನೇ ಭಾಗದ ಸ್ಟ್ರಿಪ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಎರಡನೇ ಭಾಗವನ್ನು ನೋಡಲು ಕಾಯುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಅಂದ ಹಾಗೆ ಎಲ್ಲವೂ ಸರಿ ಹೋದರೆ ಈ ವರ್ಷವೇ ಎರಡನೇ ಭಾಗವನ್ನೂ ರಿಲೀಸ್ ಮಾಡುವ ಉದ್ದೇಶ ಕೃಷ್ಣ ಅವರಿಗಿದೆಯಂತೆ.
ಇದರಲ್ಲಿ ಇನ್ನಷ್ಟು ಓದಿ :