ಮೆಗಾಸ್ಟಾರ್ ಚಿರು ಅಳಿಯ, ನಟ ಸಾಯಿ ಧರ್ಮ ತೇಜ್ ಗೆ ಅಪಘಾತ

ಹೈದರಾಬಾದ್| Krishnaveni K| Last Modified ಶನಿವಾರ, 11 ಸೆಪ್ಟಂಬರ್ 2021 (08:45 IST)
ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಸೋದರಳಿಯ, ನಟ ಸಾಯಿ ಧರ್ಮ ತೇಜ್ ನಿನ್ನೆ ರಾತ್ರಿ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ.
Photo Courtesy: Google
 > ಹೈದರಾಬಾದ್ ನ ಮಾಧಪುರ್ ರಸ್ತೆಯಲ್ಲಿ ಬೈಕ್ ನಲ್ಲಿ ಬರುತ್ತಿದ್ದ ಸಾಯಿ ತೇಜ್ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣವೆನ್ನಲಾಗಿದೆ.>   ಅವರೀಗ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯಕ್ಕೆ ವೆಂಟಿಲೇಟರ್ ನಲ್ಲಿದ್ದು, ಅಭಿಮಾನಿಗಳು ಗಾಬರಿಯಾಗಬೇಕಿಲ್ಲ ಎಂದು ಮೆಗಾಸ್ಟಾರ್ ಚಿರಂಜೀವಿ ಟ್ವೀಟ್ ಮಾಡಿದ್ದಾರೆ. ಇನ್ನು, ಆಸ್ಪತ್ರೆಯಲ್ಲಿರುವ ಸಾಯಿ ಧರ್ಮ ತೇಜ್ ರನ್ನು ನಟ ಪವನ್ ಕಲ್ಯಾಣ್, ಚಿರಂಜೀವಿ ಕುಟುಂಬ ಭೇಟಿ ನೀಡಿದೆ.ಇದರಲ್ಲಿ ಇನ್ನಷ್ಟು ಓದಿ :