ನಟಿ ಮೇಘಾ ಶೆಟ್ಟಿ ಕಡೆಯಿಂದ ಎರಡೆರಡು ಭರ್ಜರಿ ಸಿಹಿ ಸುದ್ದಿ

ಬೆಂಗಳೂರು| Krishnaveni K| Last Modified ಶುಕ್ರವಾರ, 16 ಜುಲೈ 2021 (08:50 IST)
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಕಡೆಯಿಂದ ಒಂದೇ ದಿನ ಎರಡು ಸಿಹಿ ಸುದ್ದಿ ಸಿಕ್ಕಿದೆ.
 > ಮೇಘಾ ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಕೊನೆಗೂ ಧಾರವಾಹಿ ತಂಡದ ಜೊತೆಗಿನ ಬಿಕ್ಕಟ್ಟು ಪರಿಹಾರವಾಗಿದ್ದು, ಮೇಘಾ ಕಮ್ ಬ್ಯಾಕ್ ಮಾಡಿದ್ದಾರೆ.>   ಇದರ ಬಗ್ಗೆ ವಿಡಿಯೋ ಸಂದೇಶ ನೀಡಿರುವ ಮೇಘಾ ಕೆಲವೊಂದು ಭಿನ್ನಾಭಿಪ್ರಾಯಗಳಾಗಿದ್ದು ನಿಜ. ಆದರೆ ಈಗ ಎಲ್ಲವೂ ಸರಿಯಾಗಿದೆ. ಧಾರವಾಹಿಯ ಕೊನೆಯ ಕಂತಿನವರೆಗೂ ಅನು ಸಿರಿಮನೆ ಪಾತ್ರ ತಾವೇ ಮಾಡುವುದಾಗಿ ಸ್ಪಷ್ಟನೆ ನೀಡಿದ್ದಾರೆ.
 
ಅದರ ಜೊತೆಗೆ ಇನ್ನೊಂದು ಸಿಹಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡಿದೆ. ಶಶಾಂಕ್ ನಿರ್ದೇಶನದ ಹೊಸ ಸಿನಿಮಾ ಲವ್ 360 ಗೆ ನಾಯಕ ಪ್ರವೀಣ್ ಗೆ ನಾಯಕಿಯಾಗಲು ಮೇಘಾ ಶೆಟ್ಟಿಗೆ ಆಫರ್ ನೀಡಲಾಗಿದೆ ಎಂಬ ಸುದ್ದಿ ಹರಡಿದೆ. ಈ ಬಗ್ಗೆ ಮೇಘಾ ಕಡೆಯಿಂದ ಇನ್ನೂ ಅಂತಿಮ ಮುದ್ರೆ ಬಿದ್ದಿಲ್ಲ. ಈಗಾಗಲೇ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :