ಚಿರು ಸರ್ಜಾ ನೆನೆದು ಭಾವುಕರಾದ ಮೇಘನಾ ರಾಜ್

ಬೆಂಗಳೂರು| Krishnaveni K| Last Modified ಶುಕ್ರವಾರ, 30 ಏಪ್ರಿಲ್ 2021 (10:16 IST)
ಬೆಂಗಳೂರು: ಕಳೆದ ವರ್ಷ ಅಗಲಿದ ಪತಿ ಚಿರಂಜೀವಿ ಸರ್ಜಾರನ್ನು ನೆನೆದು ಪತ್ನಿ, ನಟಿ ಮೇಘನಾ ರಾಜ್ ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬರೆದಿದ್ದಾರೆ.  
> ಚಿರು ಜೊತೆಗೆ ಪ್ಯಾರಿಸ್ ನಲ್ಲಿ ತೆಗೆದಿದ್ದ ಅಪರೂಪದ ಚಿತ್ರ ಪ್ರಕಟಿಸಿದ ಮೇಘನಾ ‘ಐ ಲವ್ ಯೂ.. ಪ್ಲೀಸ್ ಕಮ್ ಬ್ಯಾಕ್ ಚಿರು’ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಆಕ್ಟಿವ್ ಆಗಿದ್ದರೂ ಮೇಘನಾ ಕೇವಲ ತಮ್ಮ ಪುತ್ರನ ಬಗ್ಗೆ ಇಲ್ಲವೇ ಪತಿಯ ಬಗ್ಗೆ ಬರೆದುಕೊಳ್ಳುತ್ತಾರೆ.>   ಸಿನಿಮಾಗಳಿಂದ ದೂರವೇ ಉಳಿದಿರುವ ಮೇಘನಾ ಮೊನ್ನೆಯಷ್ಟೇ ಪುತ್ರನಿಗೆ ಆರು ತಿಂಗಳು ತುಂಬಿದ ಖುಷಿಯನ್ನು ಫೋಟೋ ಶೂಟ್ ಮಾಡುವ ಮೂಲಕ ಆಚರಿಸಿಕೊಂಡಿದ್ದರು.ಇದರಲ್ಲಿ ಇನ್ನಷ್ಟು ಓದಿ :