ಜಯಂತಿ ಸಾವಿಗೆ ಸಂತಾಪ ವ್ಯಕ್ತಪಡಿಸಿದ ಅನು ಪ್ರಭಾಕರ್ ಗೆ ನೆಟ್ಟಿಗರ ಮೆಚ್ಚುಗೆ

ಬೆಂಗಳೂರು| Krishnaveni K| Last Modified ಮಂಗಳವಾರ, 27 ಜುಲೈ 2021 (09:06 IST)
ಬೆಂಗಳೂರು: ಹಿರಿಯ ನಟಿ ಜಯಂತಿ ಅವರ ಸಾವಿಗೆ ನಿನ್ನೆ ಅನೇಕ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ. ಆದರೆ ನಟಿ, ಜಯಂತಿ ಅವರ ಮಾಜಿ ಸೊಸೆ ಅನು ಪ್ರಭಾಕರ್ ಸಂತಾಪ ವ್ಯಕ್ತಪಡಿಸಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 > ಅನು ಪ್ರಭಾಕರ್ ಈ ಮೊದಲು ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ಅವರನ್ನು ಮದುವೆಯಾಗಿದ್ದರು. ಆದರೆ ಬಳಿಕ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದರು.>   ಹಾಗಿದ್ದರೂ ಅನು ಪ್ರಭಾಕರ್ ಈಗ ಜಯಂತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಲ್ಲದೆ, ನಿಮ್ಮ ಜೊತೆ ಕಳೆದ ಪ್ರತೀ ಕ್ಷಣ ಸ್ಮರಣೀಯವಾಗಿರುತ್ತೆ ಮಾಮ್. ನಿಮ್ಮಿಂದ ನಾನು ಅನೇಕ ವಿಚಾರಗಳನ್ನು ಕಲಿತೆ. ನಿಮ್ಮ ಆತ್ಮೀಯರನ್ನು ಕಳೆದುಕೊಂಡಾಗ ಈ ವಿಚಾರದ ಬಗ್ಗೆ ಎಷ್ಟೋ ಬಾರಿ ನನ್ನ ಹತ್ರ ಮಾತಾಡಿದ್ರಿ. ಅಮ್ಮಮ್ಮನ ಜೊತೆ ನೆಮ್ಮದಿಯಾಗಿರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಜಯಂತಿ ಜೊತೆಗಿನ ಆತ್ಮೀಯ ಕ್ಷಣದ ಫೋಟೋ ಪ್ರಕಟಿಸಿದ್ದರು. ಈ ಪೋಸ್ಟ್ ನೋಡಿ ಕಾಮೆಂಟ್ ಮಾಡಿರುವ ನೆಟ್ಟಿಗರು, ನಿಮ್ಮ ಹೃದಯ ವೈಶಾಲ್ಯತೆಗೆ ನಮಸ್ಕಾರ. ಹಳೆಯದನ್ನು ಯಾವುದನ್ನೂ ಮನಸ್ಸಲ್ಲಿಟ್ಟುಕೊಳ್ಳದೇ ಸಂತಾಪ ಸೂಚಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :