ಬಾಲಿವುಡ್ ನಟನ ಪತ್ನಿಗೆ ಹೊಸ ಸಂಕಷ್ಟ

ಮುಂಬೈ| Jagadeesh| Last Modified ಶುಕ್ರವಾರ, 16 ಅಕ್ಟೋಬರ್ 2020 (12:17 IST)
ಬಾಲಿವುಡ್ ನಟನ ಪತ್ನಿಗೆ ಸಂಕಷ್ಟ ಎದುರಾಗಿದೆ.

ಡ್ರಗ್ ಲಿಂಕ್ ಕೇಸ್ ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಈ ನಡುವೆ ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಕೇಸ್ ನಲ್ಲಿ ಆರೋಪಿಯಾಗಿರುವ ಆದಿತ್ಯ ಆಳ್ವಾ ಇನ್ನೂ ಸಿಕ್ಕಿಲ್ಲ.

ಹೀಗಾಗಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ಪತ್ನಿ ಪ್ರಿಯಾಂಕಾ ಆಳ್ವಾಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.  

ಈ ಕೇಸ್ ಗೆ ಸಂಬಂಧ ಪಟ್ಟಂತೆ ವಿವೇಕ್ ಒಬೇರಾಯ್ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
 

 
ಇದರಲ್ಲಿ ಇನ್ನಷ್ಟು ಓದಿ :