ಪ್ರಭಾಸ್ ಈ ಚಿತ್ರದಲ್ಲಿ ಒಂದೇ ಒಂದು ಆಕ್ಷನ್ ದೃಶ್ಯಗಳಿಲ್ಲವಂತೆ

ಹೈದರಾಬಾದ್| pavithra| Last Modified ಬುಧವಾರ, 21 ಅಕ್ಟೋಬರ್ 2020 (12:47 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ಪ್ರಭಾಸ್ ಅವರು ಹೆಚ್ಚಾಗಿ ಆಕ್ಷನ್ ಸಿನಿಮಾದಲ್ಲಿ ನಟಿಸುತ್ತಾರೆ. ಆದರೆ ಅವರು ನಟಿಸುತ್ತಿರುವ ಈ ಸಿನಿಮಾದಲ್ಲಿ ಮಾತ್ರ ಒಂದೇ ಒಂದು ಆಕ್ಷನ್ ದೃಶ್ಯಗಳಿಲ್ಲವಂತೆ.
ಹೌದು.  ಪ್ರಭಾಸ್ ನಟಿಸಿದ ಬಾಹುಬಲಿ, ಸಾಹೋ ಸೇರಿದಂತೆ ಎಲ್ಲಾ ಚಿತ್ರಗಳು ಆಕ್ಷನ್ ಸಿನಿಮಾಗಳಾಗಿವೆ, ಅದೇರೀತಿ ಅವರು ನಟಿಸುತ್ತಿರುವ ‘ರಾಧೆ ಶ್ಯಾಮ’ ಸಿನಿಮಾದಲ್ಲೂ ಆಕ್ಷನ್ ದೃಶ್ಯಗಳಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ಪ್ರಭಾಸ್ ಶಾಂತ ಸ್ವರೂಪದವರಾಗಿದ್ದು, ಅದರಲ್ಲಿ ಪ್ರಭಾಸ್ ಒಬ್ಬ ವ್ಯಕ್ತಿಗೂ ಕೂಡ ಕಪಾಳಮೋಕ್ಷ ಕೂಡ ಮಾಡುವುದಿಲ್ಲವಂತೆ. ಇದು ತುಂಬಾ ಭಿನ್ನವಾಗಿದೆ ಎನ್ನಲಾಗಿದೆ.> > ಈ ಚಿತ್ರವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶಿಸುತ್ತಿದ್ದು, ಯುವಿ ಕ್ರಿಯೆಷನ್ಸ್ ನಿರ್ಮಿಸುತ್ತಿದ್ದಾರಂತೆ. ಇದರ ಚಿತ್ರೀಕರಣ ಇಟಲಿಯಲ್ಲಿ ನಡೆಯುತ್ತಿದೆ. ಇದನ್ನು ಮುಂದಿನ ಬೇಸಿಗೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :