Widgets Magazine

ತಮ್ಮ ಜಿಮ್ ಟ್ರೈನರ್ ಗೆ ಭರ್ಜರಿ ಉಡುಗೊರೆ ನೀಡಿದ ನಟ ಪ್ರಭಾಸ್

ಹೈದರಾಬಾದ್| pavithra| Last Modified ಭಾನುವಾರ, 6 ಸೆಪ್ಟಂಬರ್ 2020 (11:56 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ಪ್ರಭಾಸ್ ಅವರು ತಮ್ಮ ಜಿಮ್ ಟ್ರೈನರ್ ಗೆ ಭರ್ಜರಿ ಉಡುಗೊರೆಯೊಂದನ್ನು ನೀಡಿದ್ದಾರೆ.

ಹೌದು. ನಟ ಪ್ರಭಾಸ್ ಅವರು ತಮ್ಮ ಸ್ನೇಹಿತ ಹಾಗೂ ಜಿಮ್ ಟ್ರೈನರ್ ಆದ ಲಕ್ಷ್ಮಣ್ ರೆಡ್ಡಿಗೆ ದುಬಾರಿ ಬೆಲೆಯ ಐಶರಾಮಿ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಬೂದು ಬಣ್ಣದ ರೇಂಜ್ ರೋವರ್  ಕಾರಿನ ಬೆಲೆ 73ಲಕ್ಷ ರೂ ಆಗಿದೆ ಎನ್ನಲಾಗಿದೆ.

ಕಾರಿನ ಜೊತೆ ಜಿಮ್ ಟ್ರೈನರ್ ಮತ್ತು ಪ್ರಭಾಸ್ ನಿಂತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಮ್ ಟ್ರೈನರ್ ಗೆ ಇಂತಹ ದುಬಾರಿ ಗಿಫ್ಟ್ ನ್ನು ನೀಡಿದ್ದಕ್ಕಾಗಿ ಜಿಮ್ ಟ್ರೈನರ್ ಕುಟುಂಬದವರು ಮತ್ತು ಪ್ರಭಾಸ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :