ಪ್ರಜ್ವಲ್ ದೇವರಾಜ್ ದಂಪತಿಗೆ ಕೊರೋನಾ ಪಾಸಿಟಿವ್

ಬೆಂಗಳೂರು| Krishnaveni K| Last Modified ಶುಕ್ರವಾರ, 2 ಏಪ್ರಿಲ್ 2021 (09:19 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ತಾರಾ ದಂಪತಿ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ ಪ್ರಜ್ವಲ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ.  
> ಈ ವಿಚಾರವನ್ನು ಸ್ವತಃ ದಂಪತಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ‘ನನಗೆ ಹಾಗೂ ಪ್ರಜ್ವಲ್ ದೇವರಾಜ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ. ನಾವು ಚಿಕಿತ್ಸೆ ಪಡೆಯುತ್ತಿದ್ದೇವೆ. ಜೊತೆಯಾಗಿ ಇದರ ವಿರುದ್ಧ ಹೋರಾಡಲಿದ್ದೇವೆ. ಎಲ್ಲರೂ ಸುರಕ್ಷಿತರಾಗಿರಿ’ ಎಂದು ರಾಗಿಣಿ ಬರೆದುಕೊಂಡಿದ್ದಾರೆ.>   ಅತ್ತ ಪ್ರಜ್ವಲ್ ದೇವರಾಜ್ ಕೂಡಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಇದೇ ಸಂದೇಶ ಬರೆದಿದ್ದಾರೆ. ನಾವಿಬ್ಬರೂ ಆದಷ್ಟು ಬೇಗ ಮಹಾಮಾರಿಯಿಂದ ಚೇತರಿಸಿಕೊಳ್ಳಲಿದ್ದೇವೆ. ನಿಮ್ಮ ಹಾರೈಕೆಯಿರಲಿ ಎಂದು ಪ್ರಜ್ವಲ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :