ನಿರ್ಮಾಪಕ ಬಾಬುರಾಜಾ ನಿಧನ

ಹೈದರಾಬಾದ್| pavithra| Last Modified ಮಂಗಳವಾರ, 27 ಏಪ್ರಿಲ್ 2021 (12:57 IST)
ಹೈದರಾಬಾದ್ : ಜನಪ್ರಿಯ ನಿರ್ಮಾಪಕ ಸೂಪರ್ ಗುಡ್ ಬಾಬುರಾಜಾ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆಲವು ದಿನಗಳ ಹಿಂದೆ ಕೊವಿಡ್ 19 ಧನಾತ್ಮಕ ಪರೀಕ್ಷೆ ಮಾಡಿಸಿದ್ದರು. ಬಳಿಕ ಅವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಕಾಲಿವುಡ್ ಸೆಲೆಬ್ರಿಟಿಗಳು ಶೋಕ ವ್ಯಕ್ತಪಡಿಸಿದ್ದಾರೆ.

ಇಪ್ಪತ್ತೈದು ವರ್ಷಗಳ ಕಾಲ ಜನಪ್ರಿಯ ಪ್ರೊಡಕ್ಷನ್ ಹೌಸ್ ಸೂಪರ್ ಗುಡ್ ಫಿಲ್ಮ್ ನ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ ಬಾಬುರಾಜ ನಂತರ ತಮ್ಮದೇ ಆದ ಜೆಜೆ ಗುಡ್ ಫಿಲ್ಮ್ಸ್ ಅನ್ನು ಪ್ರಾರಂಭಿಸಿದರು. ಬಳಿಕ ಅರಸು ಮತ್ತು ಚತ್ರಪತಿ ಚಿತ್ರಗಳನ್ನು ನಿರ್ಮಿಸಿದರು.

ಇದರಲ್ಲಿ ಇನ್ನಷ್ಟು ಓದಿ :