ಸಿಎಂ ಭೇಟಿಗೆ ಮುಂದಾದ ನಿರ್ಮಾಪಕ ಕೆ ಮಂಜು

ಬೆಂಗಳೂರು| Krishnaveni K| Last Modified ಬುಧವಾರ, 7 ಏಪ್ರಿಲ್ 2021 (09:01 IST)
ಬೆಂಗಳೂರು: ಥಿಯೇಟರ್ ನಲ್ಲಿ 100 ಶೇಕಡಾ ಅವಕಾಶಕ್ಕೆ ಆಗ್ರಹಿಸಿ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ನಿರ್ಮಾಪಕ ಕೆ ಮಂಜು ನಾಳೆ ಸಿಎಂ ಭೇಟಿಗೆ ತೀರ್ಮಾನಿಸಿದ್ದಾರೆ.

 
ಇಂದಿಗೆ ಥಿಯೇಟರ್ ಗಳಲ್ಲಿ ಶೇ. 100 ಪ್ರೇಕ್ಷಕರ ಹಾಜರಾತಿಗೆ ಕೊನೆಯ ಅವಕಾಶ. ನಾಳೆಯಿಂದ ಶೇ.50 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಈ ಹಿನ್ನಲೆಯಲ್ಲಿ ಮಂಜು ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಲು ತೀರ್ಮಾನಿಸಿದ್ದಾರೆ.
 
ನಿರ್ಮಾಪಕ ಸಾಯುತ್ತಿದ್ದಾನೆ. ಅವನಿಗೂ ಬದುಕಲು ಅವಕಾಶ ಮಾಡಿಕೊಡಿ ಎಂದು ಮಂಜು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಕೆ ಮಂಜು ನಿರ್ಮಾಣದ, ಅವರ ಪುತ್ರ ಶ್ರೇಯಸ್ ಮಂಜು ನಾಯಕರಾಗಿರುವ ವಿಷ್ಣು ಪ್ರಿಯ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಹೀಗಾಗಿ ಮಂಜು ಈಗ ಹೋರಾಟಕ್ಕಿಳಿದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :