ಎರಡು ಪ್ಯಾಕ್ ಸಿಗರೇಟು ಖಾಲಿ ಮಾಡಿದ್ದರಂತೆ ರಚಿತಾ ರಾಮ್!

ಬೆಂಗಳೂರು| Krishnaveni K| Last Modified ಶನಿವಾರ, 15 ಫೆಬ್ರವರಿ 2020 (10:46 IST)
ಬೆಂಗಳೂರು: ಏಕ್ ಲವ್ ಯಾ ಸಿನಿಮಾದಲ್ಲಿ ಸಿಗರೇಟು ಸೀನ್ ಮೂಲಕ ಅಭಿಮಾನಿಗಳನ್ನು ದಂಗುಬಡಿಸಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಸಿಗರೇಟು ಸೀನ್ ಮಾಡಲು ಪಟ್ಟ ಕಷ್ಟವನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.
 

ನನಗೆ ಸಿಗರೇಟು ಸೇದಿ ಅಭ್ಯಾಸವಿಲ್ಲ. ಹೀಗಾಗಿ ಆ ಒಂದು ಶಾಟ್ ಗೆ ಎರಡು ಪ್ಯಾಕ್ ಸಿಗರೇಟು ಖಾಲಿ ಮಾಡಿದ್ದೇನೆ ಎಂದು ರಚಿತಾ ಬಹಿರಂಗಪಡಿಸುತ್ತಿದ್ದಂತೇ ಪಕ್ಕದಲ್ಲಿದ್ದ ನಿರ್ಮಾಪಕಿ ರಕ್ಷಿತಾ ಪ್ರೆಮ್ ಏನಿದು ಎಂದು ಅಚ್ಚರಿಗೊಳಗಾದರು.
 
ಆಗ ಸ್ಪಷ್ಟನೆ ಕೊಟ್ಟ ರಚಿತಾ ನನಗೆ ಸಿಗರೇಟು ಸೇದೋದು ಅಭ್ಯಾಸವಿಲ್ಲ. ಹೀಗಾಗಿ ಪರ್ಫೆಕ್ಟ್ ಆಗಿ ಬರೋದಕ್ಕೆ ಅಷ್ಟು ಬೇಕಾಯ್ತು. ಅಷ್ಟು ಸಿಗರೇಟು ಖಾಲಿ ಮಾಡಿದ ಮೇಲೆ ಎರಡು ದಿನ ಕೆಮ್ಮು ಬಂದಿತ್ತು ಎಂದೂ ರಚಿತಾ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :