Widgets Magazine

ಪುತ್ರಿ ಐರಾ ಯಶ್ ಮೊದಲ ಜನ್ಮ ದಿನಕ್ಕೆ ರಾಧಿಕಾ ಪಂಡಿತ್ ಭಾವನಾತ್ಮಕ ಸಂದೇಶ

ಬೆಂಗಳೂರು| Krishnaveni K| Last Modified ಸೋಮವಾರ, 2 ಡಿಸೆಂಬರ್ 2019 (09:17 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮೊದಲ ಪುತ್ರಿ ಐರಾ ಯಶ್ ಗೆ ಇಂದು ಮೊದಲ ಜನ್ಮದಿನದ ಸಂಭ್ರಮ. ಸಹಜವಾಗಿಯೇ ತಮ್ಮ ಮುದ್ದಿನ ಮಗಳ ಜನ್ಮ ದಿನಕ್ಕೆ ರಾಧಿಕಾ ಸುಂದರ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

 
ಜತೆಗೆ ಮಗಳ ಬಗ್ಗೆ ಭಾವನಾತ್ಮಕವಾಗಿ ಸಂದೇಶ ಬರೆದುಕೊಂಡಿದ್ದಾರೆ. ‘ನನ್ನ ಹೃದಯದ ಭಾಗವಾಗಿರುವಾಗ, ನನ್ನ ಆತ್ಮದ ಭಾಗವಾಗಿರುವ ನಿನಗೆ ಹುಟ್ಟು ಹಬ್ಬದ ಶುಭಾಷಯಗಳು’ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಜತೆಗೆ ಐರಾ ಜತೆಗಿನ ಸುಂದರ ಕ್ಷಣದ ಫೋಟೋ ಪ್ರಕಟಿಸಿದ್ದಾರೆ.
 
ಇನ್ನು, ಐರಾ ಯಶ್ ಮೊದಲನೇ ವರ್ಷದ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಯಶ್ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಶುಭಾಷಯ ಸಲ್ಲಿಸುತ್ತಿದ್ದಾರೆ. ಅಂತೂ ಮೊದಲನೇ ವರ್ಷಕ್ಕೇ ತಾನು ಎಷ್ಟು ಜನಪ್ರಿಯಳು ಎನ್ನುವುದನ್ನು ಐರಾ ಸಾಬೀತುಪಡಿಸಿದ್ದಾಳೆ.
ಇದರಲ್ಲಿ ಇನ್ನಷ್ಟು ಓದಿ :