ಮುಂಬೈ|
Krishnaveni K|
Last Modified ಮಂಗಳವಾರ, 1 ಅಕ್ಟೋಬರ್ 2019 (10:25 IST)
ಮುಂಬೈ: ಸೂಪರ್ ಸ್ಟಾರ್ ರಜನೀಕಾಂತ್ ಸಾಮಾನ್ಯವಾಗಿ ಪತ್ನಿ ಲತಾ ಜತೆ ಬಹಿರಂಗವಾಗಿ ರೊಮ್ಯಾಂಟಿಕ್ ಫೋಟೋಗಳಿಗೆ ಪೋಸ್ ಕೊಡೋದು ಕಡಿಮೆ.
ಆದರೆ ಇದೀಗ ಲತಾ ಮತ್ತು ರಜನಿ ದಂಪತಿಯ ರೊಮ್ಯಾಂಟಿಕ್ ಫೋಟೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ನಿ ಜತೆಗಿನ ರಜನಿ ಅಪರೂಪದ ಪೋಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಮುಂಬೈನಲ್ಲಿ ಶೂಟಿಂಗ್ ವೇಳೆ ಪೊಲೀಸ್ ದಿರಿಸಿನಲ್ಲಿರುವ ರಜನಿ ಜತೆಗೆ ಲತಾ ರೊಮ್ಯಾಂಟಿಕ್ ಆಗಿ ನಿಂತಿರುವ ಫೋಟೋ ಒಂದು ಇದೀಗ ವೈರಲ್ ಆಗಿದೆ. ಈ ಫೋಟೋದಲ್ಲಿ ರಜನಿ ಲುಕ್ ನೋಡಿದರೆ ಇವರು ಅವರೇನಾ ಎನ್ನುವಷ್ಟು ವಿಭಿನ್ನವಾಗಿ ಕಾಣಿಸುತ್ತಿದ್ದಾರೆ.