ಅಲ್ಲು ಅರ್ಜುನ್ ಸಿನಿಮಾದಲ್ಲಿ ಈ ಥರದ ಪಾತ್ರ ಮಾಡಲಿದ್ದಾರಂತೆ ರಶ್ಮಿಕಾ ಮಂದಣ್ಣ!

ಹೈದರಾಬಾದ್| Krishnaveni K| Last Modified ಶುಕ್ರವಾರ, 20 ಸೆಪ್ಟಂಬರ್ 2019 (09:09 IST)
ಹೈದರಾಬಾದ್: ನಟಿ ಅಲ್ಲು ಅರ್ಜುನ್ ಜತೆಗೆ ಹೊಸದೊಂದು ತೆಲುಗು ಸಿನಿಮಾ ಮಾಡಲು ಒಪ್ಪಿಕೊಂಡಿದ್ದು, ಇದರಲ್ಲಿ ತಾವು ಇದುವರೆಗೆ ಮಾಡದ ಪಾತ್ರವೊಂದನ್ನು ಮಾಡಲಿದ್ದಾರಂತೆ.

 
ಇದುವರೆಗೆ ತಾವು ಮಾಡಿದ ಎಲ್ಲಾ ಸಿನಿಮಾಗಳಲ್ಲಿ ರಶ್ಮಿಕಾ ಬೋಲ್ಡ್ ಪಾತ್ರಗಳನ್ನೇ ಮಾಡಿದ್ದರು. ಆದರೆ ಈ ಸಿನಿಮಾದಲ್ಲಿ ರಶ್ಮಿಕಾ ಸಂಪ್ರದಾಯಸ್ಥ, ಗ್ಲಾಮರ್ ಗೆ ಅವಕಾಶವೇ ಇಲ್ಲದಂತ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ.
 
ರಂಗಸ್ಥಳಂ ಸಿನಿಮಾ ಖ್ಯಾತಿಯ ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಶ್ಮಿಕಾ ಅಲ್ಲು ಅರ್ಜುನ್ ಗೆ ನಾಯಕಿಯಾಗುತ್ತಿದ್ದಾರೆ. ಹೀಗಾಗಿ ಆ ಸಿನಿಮಾದಲ್ಲಿ ಸಮಂತಾ ನಿರ್ವಹಿಸಿದ್ದಂತ ಡಿಗ್ಲಾಮರಸ್ ಪಾತ್ರವನ್ನೇ ರಶ್ಮಿಕಾ ಮಾಡಲಿದ್ದಾರೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :