ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರವಿಬೋಪಣ್ಣ ಯಾವ ಸಿನಿಮಾ ರಿಮೇಕ್ ಗೊತ್ತೇ?

ಬೆಂಗಳೂರು| Krishnaveni K| Last Modified ಸೋಮವಾರ, 4 ನವೆಂಬರ್ 2019 (09:06 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ರವಿ ಬೋಪಣ್ಣ ಸಿನಿಮಾ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದಿದೆ.

 
ಈ ಸಿನಿಮಾದಲ್ಲಿ ರವಿಚಂದ್ರನ್ ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಇದು ಅಂಗದಾನ ಮಾಫಿಯಾ ಕುರಿತ ಕತೆಯಿರುವ ಸಿನಿಮಾವಾಗಿದೆ. ಈ ಸಿನಿಮಾ ಮಲಯಾಳಂ ಸಿನಿಮಾವೊಂದರ ರಿಮೇಕ್ ಆಗಿದೆ.
 
ಅದು ಕಳೆದ ವರ್ಷ ಮಲಯಾಳಂನಲ್ಲಿ ಹಿಟ್ ಆಗಿದ್ದ ‘ಜೋಸೆಫ್’ ಸಿನಿಮಾದ ರಿಮೇಕ್ ರವಿ ಬೋಪಣ್ಣ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡಾ ಅತಿಥಿ ಪಾತ್ರ ಮಾಡಿರುವುದು ವಿಶೇಷವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :