ಕಥಾ ಸಂಗಮ ಸಿನಿಮಾದಲ್ಲಿ ಹೊಸ ಪ್ರಯೋಗ ಮಾಡಲು ರಿಷಬ್ ಶೆಟ್ಟಿಗೆ ಸ್ಪೂರ್ತಿ ಯಾರು ಗೊತ್ತೇ?

ಬೆಂಗಳೂರು| Krishnaveni K| Last Modified ಶನಿವಾರ, 2 ನವೆಂಬರ್ 2019 (08:08 IST)
ಬೆಂಗಳೂರು: ಪ್ರತಿಭಾವಂತ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಕಥಾಸಂಗಮ ಸಿನಿಮಾ ಟ್ರೈಲರ್ ಬಿಡುಗಡೆಗೂ ಮುನ್ನ ಮಾಧ್ಯಮಗೋಷ್ಠಿ ನಡೆಸಿದ್ದು, ಈ ಸಿನಿಮಾಗೆ ಸ್ಪೂರ್ತಿ ಯಾರೆಂದು ಬಹಿರಂಗಪಡಿಸಿದ್ದಾರೆ.
 

ರಿಷಬ್ ಜತೆಗೆ ಒಟ್ಟು ಏಳು ನಿರ್ದೇಶಕರು ಒಂದೇ ಸಿನಿಮಾಗೆ ಕೆಲಸ ಮಾಡಿರುವುದು ಸಿನಿಮಾದ ವಿಶೇಷ. ರಿಷಬ್ ಶೆಟ್ಟಿ, ಹರಿಪ್ರಿಯಾ, ರಾಜ್ ಬಿ ಶೆಟ್ಟಿ ಮೊದಲಾದವರು ಅಭಿನಯಿಸಿದ್ದಾರೆ.
 
ಹಿಂದೆ ಪುಟ್ಟಣ್ಣ ಕಣಗಾಲ್ ಇದೇ ಟೈಟಲ್ ಇಟ್ಟುಕೊಂಡು ಮೂರು ಕತೆಗಳನ್ನು ಒಂದೇ ಸಿನಿಮಾದಲ್ಲಿ ಹೇಳಿದ್ದರು. ಅದರಿಂದ ಸ್ಪೂರ್ತಿಯಾಗಿ ಅದೇ ಟೈಟಲ್ ಇಟ್ಟುಕೊಂಡು ರಿಷಬ್ ಈಗ ಸಿನಿಮಾ ಮಾಡಿದ್ದಾರೆ. ಹಿಂದಿನ ಕಥಾ ಸಂಗಮ ಸಿನಿಮಾದಲ್ಲಿ ಪುಟ್ಟಣ್ಣ ಒಬ್ಬರೇ ನಿರ್ದೇಶಕರಾಗಿದ್ದರು. ಆದರೆ ಈ ಸಿನಿಮಾದಲ್ಲಿ ಏಳು ಕತೆಯನ್ನು ಒಂದೇ ಸಿನಿಮಾದಲ್ಲಿ ಏಳು ನಿರ್ದೇಶಕರಿಂದ ನಿರ್ದೇಶನ ಮಾಡಿಸಿ ತೋರಿಸಲಾಗಿದೆ. ಇಂತಹದ್ದೊಂದು ಪ್ರಯೋಗ ಮಾಡುವುದಕ್ಕೆ ಪುಟ್ಟಣ್ಣ ಕಣಗಾಲ್ ಅವರೇ ನಮಗೆ ಸ್ಪೂರ್ತಿ ಎಂದು ರಿಷಬ್ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :