ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ 50 ದಿನ ಮೊದಲೇ ಅಭಿಮಾನಿಗಳಿಂದ ನಡೆಯುತ್ತಿದೆ ಈ ಒಳ್ಳೆ ಕೆಲಸ!

ಬೆಂಗಳೂರು| Krishnaveni K| Last Modified ಮಂಗಳವಾರ, 19 ನವೆಂಬರ್ 2019 (09:08 IST)
ಬೆಂಗಳೂರು: ತಮ್ಮ ನೆಚ್ಚಿನ ಸ್ಟಾರ್ ಗಳ ಬರ್ತ್ ಡೇ ಎಂದರೆ ಇತ್ತೀಚೆಗೆ ಅಭಿಮಾನಿಗಳಿಗೆ ಒಂದು ರೀತಿಯ ಹಬ್ಬವಾಗುತ್ತಿದೆ. ಅದನ್ನು ವಿಶೇಷವಾಗಿ ಆಚರಿಸಿ ತಮ್ಮ ಆರಾಧ್ಯ ದೈವದ ಗಮನ ಸೆಳೆಯಬೇಕು ಎಂದು ಏನೇನೋ ಸರ್ಕಸ್ ಮಾಡುತ್ತಾರೆ.

 
ಇದೀಗ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಬರೋಬ್ಬರಿ 50 ದಿನಗಳಿರುವಾಗಲೇ ಅಭಿಮಾನಿಗಳಿಂದ ಸಸಿ ನೆಡುವ ಒಳ್ಳೆ ಕೆಲಸ ನಡೆಯುತ್ತಿದೆ. ರಾಕಿಂಗ್ ಸ್ಟಾರ್ ಹುಟ್ಟುಹಬ್ಬ ನಿಮಿತ್ತ ವಿಶೇಷ ಬರ್ತ್ ಡೇ ಪೋಸ್ಟರ್ ಬಿಡುಗಡೆ ಮಾಡಿರುವ ಅಭಿಮಾನಿಗಳು ದಿನಕ್ಕೊಂದರಂತೆ ಸಸಿ ನೆಡುವ ಯೋಜನೆ ಹಮ್ಮಿಕೊಂಡಿದ್ದಾರೆ.
 
ಹೇಳಿ ಕೇಳಿ ಯಶ್ ಜಲ ಸಂರಕ್ಷಣೆ, ಗಿಡಗಳ ಸಂರಕ್ಷಣೆಗೆ ಹೆಚ್ಚು ಪ್ರೋತ್ಸಾಹ ಕೊಡುತ್ತಾರೆ. ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ಇಂತಹ ಕಾರ್ಯಕ್ರಮಗಳನ್ನು ಯಶ್ ಮಾಡುತ್ತಲೇ ಇರುತ್ತಾರೆ. ಇದೀಗ ತಮ್ಮ ನೆಚ್ಚಿನ ನಟನ ಹಾದಿಯಲ್ಲೇ ಅವರ ಅಭಿಮಾನಿಗಳೂ ನಡೆಯುತ್ತಿದ್ದು, 50 ದಿನ ಮೊದಲಿನಿಂದ ಆರಂಭವಾಗಿ ಅವರ ಬರ್ತ್ ಡೇ ದಿನದವರೆಗೂ ದಿನಕ್ಕೊಂದು ಸಸಿ ನೆಡುವ ಕಾರ್ಯವನ್ನು ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಈ ಮೂಲಕ ಹೊಸ ಟ್ರೆಂಡ್ ಹುಟ್ಟುಹಾಕುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :