ಆಕ್ಸಿಡೆಂಟ್ ನಲ್ಲಿ ಸಾಯಿ ಧರ್ಮ ತೇಜ್ ಪ್ರಾಣ ಉಳಿಸಿದ್ದು ಇದೇ!

ಹೈದರಾಬಾದ್| Krishnaveni K| Last Modified ಶನಿವಾರ, 11 ಸೆಪ್ಟಂಬರ್ 2021 (10:00 IST)
ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅಳಿಯ, ನಟ ಸಾಯಿ ಧರ್ಮ ತೇಜ್ ಅಪಘಾತದಲ್ಲಿ ಬದುಕುಳಿದಿದ್ದು ಪವಾಡವೆಂದೇ ಹೇಳಬೇಕು.
 > ನಿನ್ನೆ ರಾತ್ರಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದ ಧರ್ಮ ತೇಜ್ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಿದ್ದರೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.>   ಇದಕ್ಕೆ ಕಾರಣ ಬೈಕ್ ಚಾಲನೆ ಮಾಡುವಾಗ ಅವರು ತಲೆಗೆ ಹೆಲ್ಮೆಟ್ ಧರಿಸಿದ್ದರು. ರಸ್ತೆ ಸುರಕ್ಷತೆ ಬಗ್ಗೆ ಸಂಚಾರಿ ಪೊಲೀಸರು ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸುತ್ತಲೇ ಇರುತ್ತಾರೆ. ಹಾಗಿದ್ದರೂ ಯುವಕರು ಅಜಾಗರೂಕತೆಯಿಂದ ಹೆಲ್ಮೆಟ್ ಧರಿಸದೇ ಪ್ರಾಣಾಪಾಯ ತಂದಿದ್ದಿದೆ. ಆದರೆ ನಟ ಸಾಯಿ ಪ್ರಕರಣದಲ್ಲಿ ಹೆಲ್ಮೆಟ್ಟೇ ಅವರ ಪ್ರಾಣ ರಕ್ಷಣೆ ಮಾಡಿದೆ.ಇದರಲ್ಲಿ ಇನ್ನಷ್ಟು ಓದಿ :