ನಿಮಗೆ ಮಕ್ಕಳಾಗೋದು ಯಾವಾಗ ಎಂದು ಕೇಳಿದ ಅಭಿಮಾನಿಗೆ ಸಮಂತಾ ಅಕ್ಕಿನೇನಿ ಕೊಟ್ಟ ಉತ್ತರವೇನು ಗೊತ್ತಾ?

ಹೈದರಾಬಾದ್| Krishnaveni K| Last Modified ಬುಧವಾರ, 20 ನವೆಂಬರ್ 2019 (09:00 IST)
ಹೈದರಾಬಾದ್: ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೋತ್ತರ ಇಟ್ಟುಕೊಂಡಾಗ ಅಭಿಮಾನಿಗಳಿಂದ ಸಾಕಷ್ಟು ತಲೆಹರಟೆಯ ಪ್ರಶ್ನೆ ಕೇಳಿಬರುತ್ತಿದೆ. ಇಂತಹದ್ದೇ ಒಂದು ಪ್ರಶ್ನೆ ನಟಿ ಸಮಂತಾ ಅಕ್ಕಿನೇನಿಗೆ ಎದುರಾಗಿದೆ.

 
ತೆಲುಗು ಸ್ಟಾರ್ ನಟ ನಾಗಚೈತನ್ಯ ಮುದ್ದಿನ ಮಡದಿ, ನಟಿ ಸಮಂತಾಗೆ ಅಭಿಮಾನಿಯೊಬ್ಬ ನಿಮಗೆ ಮಕ್ಕಳಾಗೋದು ಯಾವಾಗ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಸಮಂತಾ ಅಷ್ಟೇ ಬೋಲ್ಡ್ ಆಗಿ ಉತ್ತರಿಸಿದ್ದಾರೆ.
 
‘ನನ್ನ ದೇಹ ಬದಲಾವಣೆ ಬಗ್ಗೆ ಆಸಕ್ತಿ ಹೊಂದಿರುವ ಎಲ್ಲರೂ ಇದನ್ನು ಸರಿಯಾಗಿ ಓದಿಕೊಳ್ಳಿ. ನನಗೆ 2022 ಆಗಸ್ಟ್ 7 ಕ್ಕೆ 7 ಗಂಟೆಗೆ ಮಗುವಾಗುತ್ತೆ’ ಎಂದು ಸಮಂತಾ ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ಮದುವೆಯಾದ ಮೇಲೆ ಹಲವು ಬಾರಿ ಇದೇ ಪ್ರಶ್ನೆ ಕೇಳಿ ಕೇಳಿ ಬೇಸತ್ತಿರುವ ಸಮಂತಾ ಈ ರೀತಿ ತಿರುಗೇಟು ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :