ಕೊನೆಗೂ ಗಂಡ ನಾಗಚೈತನ್ಯ ಲವ್ ಸ್ಟೋರಿ ಬಗ್ಗೆ ಬಾಯ್ಬಿಟ್ಟ ಸಮಂತಾ

ಹೈದರಾಬಾದ್| Krishnaveni K| Last Modified ಮಂಗಳವಾರ, 14 ಸೆಪ್ಟಂಬರ್ 2021 (10:25 IST)
ಹೈದರಾಬಾದ್: ನಾಗಚೈತನ್ಯ-ಸಮಂತಾ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವರದಿಗಳ ಬೆನ್ನಲ್ಲೇ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.
 > ಸಮಂತಾ ನಾಗಚೈತನ್ಯರಿಂದ ದೂರವಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಸಮಂತಾ ಗಂಡನ ‘ಲವ್ ಸ್ಟೋರಿ’ ಸಿನಿಮಾ ಬಗ್ಗೆ ಒಳ್ಳೆಯ ಮಾತು ಹೇಳಿದ್ದಲ್ಲದೆ, ನಾಗ ಟ್ವೀಟ್ ರಿಟ್ವೀಟ್ ಮಾಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.>   ಸಾಯಿ ಪಲ್ಲವಿ-ನಟಿಸಿರುವ ಲವ್ ಸ್ಟೋರಿ ಸಿನಿಮಾ ಟ್ರೈಲರ್ ಹಿಟ್ ಆಗಿದೆ. ಈ ಬಗ್ಗೆ ನೀವು ಏನೂ ಹೇಳೇ ಇಲ್ಲ ಎಂದು ನೆಟ್ಟಿಗರು ಸಮಂತಾರನ್ನು ಪ್ರಶ್ನಿಸುತ್ತಲೇ ಇದ್ದರು. ಸಮಂತಾ ಏನೂ ಹೇಳದೇ ಇರಲು ಇಬ್ಬರ ನಡುವೆ ವಿರಸ ಮೂಡಿರುವುದು ಕಾರಣ ಎನ್ನಲಾಗುತ್ತಿತ್ತು. ಆದರೆ ಈಗ ಲವ್ ಸ್ಟೋರಿ ಟ್ರೈಲರ್ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ಸಮಂತಾ ಚಿತ್ರತಂಡಕ್ಕೆ ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ. ಸಮಂತಾ ಈ ಟ್ವೀಟ್ ಅಭಿಮಾನಿಗಳಿಗೆ ಖುಷಿ ನೀಡಿದೆ.ಇದರಲ್ಲಿ ಇನ್ನಷ್ಟು ಓದಿ :