ಅಗಲಿದ ನಟ ಸಂಚಾರಿ ವಿಜಯ್ ಗೆ ಇಂದು ಜನ್ಮದಿನ

ಬೆಂಗಳೂರು| Krishnaveni K| Last Modified ಶನಿವಾರ, 17 ಜುಲೈ 2021 (09:49 IST)
ಬೆಂಗಳೂರು: ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ದುರಂತ ಸಾವು ಕಂಡ ಪ್ರತಿಭಾವಂತ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ 39 ನೇ ಜನ್ಮದಿನವಿಂದು. ಆದರೆ ಆ ಸಂಭ್ರಮಾಚರಿಸಲು ಅವರೇ ಇಲ್ಲ.  
> ಅವರ ಜನ್ಮದಿನದ ಬೆನ್ನಲ್ಲೇ ಅವರ ಸಾಧನೆಗಳ ಕುರಿತಾದ ಪುಸ್ತಕವೊಂದು ಹೊರಬಂದಿದೆ. ಶರಣ್ ಹುಲ್ಲೂರು ಅವರ ‘ಅನಂತವಾಗಿರು’ ಎಂಬ ಪುಸ್ತಕದಲ್ಲಿ ಸಂಚಾರಿ ವಿಜಯ್ ಜೀವನಗಾಥೆಯಿದೆ.>   ಇನ್ನು, ಅವರ ಹುಟ್ಟುಹಬ್ಬದ ಸಂದರ್ಭ ಅಭಿಮಾನಿಗಳು, ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಸ್ಮರಣೆ ಮಾಡಿಕೊಂಡಿದ್ದಾರೆ. ಜೊತೆಗೆ ಅವರು ಸಾವಿನಲ್ಲೂ ಅಂಗದಾನ ಮಾಡುವ ಮೂಲಕ ಸಾರ್ಥಕತೆ ಪಡೆದುಕೊಂಡಿದ್ದನ್ನು ಸ್ಮರಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :