ಸಂಚಾರಿ ವಿಜಯ್ ಬಗ್ಗೆ ಅಪಪ್ರಚಾರ: ಸಹೋದರನ ಸ್ಪಷ್ಟನೆ

ಬೆಂಗಳೂರು| Krishnaveni K| Last Modified ಬುಧವಾರ, 23 ಜೂನ್ 2021 (10:45 IST)
ಬೆಂಗಳೂರು: ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ಮಡಿದ ನಟ ಸಂಚಾರಿ ವಿಜಯ್ ಜಾತಿ ನಿಂದನೆ ಎದುರಿಸಿದ್ದರು ಎಂಬುದಾಗಿ ಕೆಲವು ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಅವರ ಸಹೋದರ ವಿರೂಪಾಕ್ಷ ಸ್ಪಷ್ಟನೆ ನೀಡಿದ್ದಾರೆ.
 > ವಿಜಯ್ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಅವರು ಜಾತಿ ನಿಂದನೆಯನ್ನೂ ಅನುಭವಿಸಿದ್ದಾರೆ ಎಂಬಿತ್ಯಾದಿ ಮಾತುಗಳು ಕೇಳಿಬಂದಿತ್ತು. ಸ್ವತಃ ನಟ ನೀನಾಸಂ ಸತೀಶ್ ಈ ರೀತಿಯಾಗಿ ಹೇಳಿಕೆ ನೀಡಿದ್ದರು.>   ಆದರೆ ಈ ಬಗ್ಗೆ ವಿಜಯ್ ಸಹೋದರ ವಿರೂಪಾಕ್ಷ ಸ್ಪಷ್ಟನೆ ನೀಡಿದ್ದು ‘ನಮ್ಮ ಇಡೀ ಊರು ನಮ್ಮನ್ನು, ನಮ್ಮ ತಂದೆ-ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡಿದ್ದಾರೆ. ನಮಗಾಗಲೀ, ನಮ್ಮ ಕುಟುಂಬಕ್ಕಾಗಲೀ ಯಾವುದೇ ಜಾತಿ ನಿಂದನೆಯಾಗಿಲ್ಲ. ಇಂತಹ ಸುದ್ದಿಯಿಂದ ಪಂಚನಹಳ್ಳಿ ಗ್ರಾಮಸ್ಥರಿಗೆ ನೋವಾಗಿದ್ದರೆ ಕ್ಷಮೆಯಿರಲಿ. ಇಂತಹ ಸುದ್ದಿಗಳು ಹೇಗೆ ಹರಡುತ್ತವೋ ಗೊತ್ತಿಲ್ಲ’ ಎಂದು ವಿರೂಪಾಕ್ಷ ಸ್ಪಷ್ಟನೆ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :