‘ರಾಬರ್ಟ್’ ಗಾಯಕಿ ಮಂಗ್ಲಿಗೆ ಶಿವಣ್ಣ ಸಿನಿಮಾದಲ್ಲಿ ನಟಿಸುವ ಅವಕಾಶ

ಬೆಂಗಳೂರು| Krishnaveni K| Last Modified ಸೋಮವಾರ, 26 ಏಪ್ರಿಲ್ 2021 (09:49 IST)
ಬೆಂಗಳೂರು: ರಾಬರ್ಟ್ ಸಿನಿಮಾದ ಕಣ್ಣು ಹೊಡೆಯಾಕ ಹಾಡಿನ ತೆಲುಗು ವರ್ಷನ್ ‘ಕಣ್ಣೇ ಅದಿರಿಂದಿ’ ಹಾಡನ್ನು ಹಾಡಿದ್ದ ಗಾಯಕಿ ಮಂಗ್ಲಿ ಈಗ ಸ್ಯಾಂಡಲ್ ವುಡ್ ಗೆ ಪ್ರವೇಶಿಸಲಿದ್ದಾರೆ. ಅದೂ ನಟಿಯಾಗಿ!
 > ಗಾಯಕಿ ಮಂಗ್ಲಿಗೆ ಶಿವರಾಜ್ ಕುಮಾರ್ ಅಭಿನಯಿಸಲಿರುವ 124 ನೇ ಸಿನಿಮಾದಲ್ಲಿ ನಟಿಸುವ ಆಫರ್ ಸಿಕ್ಕಿದೆ. ಈ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ.>   ರಾಮ್ ಧುಲಿಪುಡಿ ನಿರ್ದೇಶಿಸಲಿರುವ ಈ ಸಿನಿಮಾದಲ್ಲಿ ಮಂಗ್ಲಿ ಕೂಡಾ ನಟಿಸಲಿದ್ದಾರೆ. ಆದರೆ ಅವರ ಪಾತ್ರವೇನು ಎಂಬುದನ್ನು ಚಿತ್ರತಂಡ ಗುಟ್ಟಾಗಿ ಇಟ್ಟುಕೊಂಡಿದೆ. ರಾಬರ್ಟ್ ಹಾಡಿಗೆ ಕನ್ನಡ ಜನರ ಪ್ರತಿಕ್ರಿಯೆ ನೋಡಿ ಖುಷಿಯಾಗಿದ್ದ ಮಂಗ್ಲಿ ಈಗ ಕನ್ನಡ ಸಿನಿಮಾದಲ್ಲಿ ಖುಷಿಯಿಂದಲೇ ನಟಿಸಲು ಒಪ್ಪಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :