ಯಾವತ್ತೂ ಬಿಟ್ಕೊಡಲ್ಲ: ದರ್ಶನ್ ಬಗ್ಗೆ ಶ್ರೀಮುರಳಿ ಮಾತು

ಬೆಂಗಳೂರು| Krishnaveni K| Last Modified ಗುರುವಾರ, 22 ಜುಲೈ 2021 (09:13 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್-ಇಂದ್ರಜಿತ್ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರು ಡಿ  ಬಾಸ್ ಗೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.

 
ಇದೀಗ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಕೂಡಾ ದರ್ಶನ್ ಬೆಂಬಲಕ್ಕೆ ನಿಂತಿರುವುದಾಗಿ ಹೇಳಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ನೀವು ಅವರನ್ನು ಫ್ರೆಂಡ್ ಅಂತೀರಾ, ಆದರೆ ಅವರ ಕಷ್ಟದ ಟೈಮಲ್ಲಿ ಜೊತೆ ನಿಲ್ಲೋದು ಸರಿ ಅಲ್ವಾ ಎಂದು ಪ್ರಶ್ನಿಸಿದ್ದರು.
 
ಇದಕ್ಕೆ ಉತ್ತರಿಸಿರುವ ಶ್ರೀಮುರಳಿ, ದರ್ಶನ್, ಅವರನ್ನು ಯಾವತ್ತಿಗೂ ನಾನು ಬಿಟ್ಕೊಡಲ್ಲ ಎಂದಿದ್ದಾರೆ. ಈಗಾಗಲೇ ಅಭಿಷೇಕ್ ಅಂಬರೀಶ್, ಪ್ರಜ್ವಲ್ ದೇವರಾಜ್, ಧನ್ವೀರ್ ಗೌಡ, ಗಾಯಕ ಹೇಮಂತ್ ಸೇರಿದಂತೆ ಅನೇಕರು ದರ್ಶನ್ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅವರ ಸಾಲಿಗೆ ಶ್ರೀಮುರಳಿ ಕೂಡಾ ಸೇರಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :