ಆಸ್ಟ್ರೇಲಿಯಾ ತಲುಪಿದ ಸೃಜನ್ ಲೋಕೇಶ್ ಸಿನಿಮಾ

ಬೆಂಗಳೂರು| Krishnaveni K| Last Modified ಮಂಗಳವಾರ, 5 ನವೆಂಬರ್ 2019 (10:31 IST)
ಬೆಂಗಳೂರು: ಸೃಜನ್ ಲೋಕೇಶ್ ತಮ್ಮದೇ ಹೋಂ ಬ್ಯಾನರ್‍ನಲ್ಲಿ ನಿರ್ಮಿಸಿ, ನಟಿಸಿದ್ದ ಸಿನಿಮಾ ಹಿಟ್ ಆಗಿತ್ತು. ಸಿನಿಮಾದ ಯಶಸ್ಸಿನಿಂದ ಸೃಜನ್ ಕೂಡಾ ಖುಷಿಯಾಗಿದ್ದರು.

 
ಇದೀಗ ಎಲ್ಲಿದ್ದೆ ಇಲ್ಲಿ ತನಕ ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗುತ್ತಿದೆ. ಸೃಜನ್ ಜತೆಗೆ ಹರಿಪ್ರಿಯಾ ನಾಯಕಿಯಾಗಿ ನಟಿಸಿರುವ ಎಲ್ಲಿದ್ದೆ ಇಲ್ಲಿ ತನಕ ಈ ವಾರ ಆಸ್ಟ್ರೇಲಿಯಾದಲ್ಲಿ ತೆರೆ ಕಾಣುತ್ತಿದೆ. ಈ ವಿಚಾರವನ್ನು ಸ್ವತಃ ಸೃಜನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
 
ಈ ಸಿನಿಮಾದ ಬಳಿಕ ಇದೇ ಚಿತ್ರತಂಡದೊಂದಿಗೆ ಮತ್ತೊಂದು ಸಿನಿಮಾ ಮಾಡಲು ಸೃಜನ್ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಕಿರುತೆರೆ ಬಿಟ್ಟು ಬೆಳ್ಳಿ ತೆರೆಯಲ್ಲೇ ಸೃಜನ್ ಬ್ಯುಸಿಯಾಗುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :