ಮತ್ತೆ ಗಾಯಕನಾಗುತ್ತಿದ್ದಾರೆ ಹಾಸ್ಯನಟ ಚಿಕ್ಕಣ್ಣ

Navya K M| Last Updated: ಬುಧವಾರ, 29 ಜೂನ್ 2016 (09:08 IST)
ದಿಗಂತ್ ಅಭಿನಯದ ಶಾರ್ಪ್ ಶೂಟರ್ ಸಿನಿಮಾದಲ್ಲಿ ಹಾಸ್ಯನಟ ಚಿಕ್ಕಣ್ಣ ಅವರು ಹಾಡೊಂದನ್ನು ಹಾಡಿದ್ದು ನಿಮಗೆಲ್ಲಾ ನೆನಪಿರಬಹುದು.ಆದ್ರೆ ಸಿನಿಮಾ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಹಾಗೇ ಸಿನಿಮಾದಲ್ಲಿನ ಚಿಕ್ಕಣ್ಣ ಅವರ ಹಾಡು ಕೂಡ ಸದ್ದು ಮಾಡಲೇ ಇಲ್ಲ. ಇದೀಗ ಚಿಕ್ಕಣ್ಣ ಮತ್ತೊಮ್ಮೆ ಕೈಯಲ್ಲಿ ಮೈಕ್ ಹಿಡಿದಿದ್ದಾರೆ.
ಅಂದ್ಹಾಗೆ ಚಿಕ್ಕಣ್ಣ ಈ ಬಾರಿ ಹಾಡುತ್ತಿರೋದು ಫ್ಯಾಥೋ ಸಾಂಗ್ ಒಂದನ್ನು.ಅದು ವಿಜಯ್ ರಾಘವೇಂದ್ರ ಹಾಗೂ ನಿಧಿ ಸುಬ್ಬ್ಯ ಅವರು ಅಭಿನಯಿಸುತ್ತಿರುವ ನನ್ನ ನಿನ್ನ ಪ್ರೇಮಕಥೆ ಸಿನಿಮಾಕ್ಕೆ.ಈಗಾಗಲೇ ಚಿಕ್ಕಣ್ಣ ತಮ್ಮ ಅಭಿನಯದಿಂದಾಗಿ ಲಕ್ಷಾಂತರ ಅಭಿಮಾನಿಗಳ ದಿಲ್ ಕದ್ದಿದ್ದಾರೆ.ಅಲ್ಲದೇ ಒಬ್ಬ ನಾಯಕ ನಟನಿಗೆ ಹೇಗೆ ಅಭಿಮಾನಿಗಳಿರುತ್ತಾರೋ ಹಾಗೇ ಚಿಕ್ಕಣ್ಣ ಅವರಿಗೂ ಅಭಿಮಾನಿಗಳಿದ್ದಾರೆ. ಇನ್ನು ಚಿಕ್ಕಣ್ಣಮಾತ್ರವಲ್ಲದೇ ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ , ಉಪೇಂದ್ರ ಹಾಗೂ ವಿಜಯ್ ರಾಘವೇಂದ್ರ ಅವರು ಕೂಡ ಒಂದೊಂದು ಹಾಡನ್ನು ಹಾಡಿದ್ದಾರಂತೆ.
 
ಸಿನಿಮಾದಲ್ಲಿನ ನಾಗರಕಟ್ಟೆ ಶಂಕರನಾಗ್ ಆರ್ಕೇಸ್ಟ್ರಾ ಅನ್ನೋ ಹಾಡಿಗೆ ಪುನೀತ್ ಧ್ವನಿಯಾಗಿದ್ರೆ, ಓಡು ಓಡು ಓಡು ಹೊಂಟೀವ್ರೀ ಅನ್ನೋ ಹಾಡನ್ನು ಉಪ್ಪಿ ಹಾಡಿದ್ದಾರೆ. ಶಿವು ಜಮಖಂಡಿ ಅವರು ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಇನ್ನು ಸಿನಿಮಾದಲ್ಲಿ ನಿಧಿ ಸುಬ್ಬಯ್ಯ ಅವರಿಗೆ ಸಹೋದರನಿಗೆ ಸಿನಿಮಾದಲ್ಲಿ ತಿಲಕ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.  ಸಿನಿಮಾದ ಹೆಚ್ಚಿನ ಭಾಗದ ಶೂಟಿಂಗ್ ನ್ನು ಉತ್ತರ ಕರ್ನಾಟಕದಲ್ಲಿ ಮಾಡಲಾಗಿದೆಯಂತೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :