ಥಿಯೇಟರ್ ನಲ್ಲೇ ನೋಡಕ್ಕಾಗ್ಲಿಲ್ಲ, ಇನ್ನು ಮನೆಲೂ ಈ ಟಾರ್ಚರ್ ನೋಡ್ಬೇಕಾ? ಮತ್ತೆ ಟ್ರೋಲ್ ಆದ ಜೋಗಿ ಪ್ರೇಮ್

ಬೆಂಗಳೂರು| Krishnaveni K| Last Modified ಬುಧವಾರ, 23 ಜನವರಿ 2019 (10:04 IST)
ಬೆಂಗಳೂರು:  ಜೋಗಿ ಪ್ರೇಮ್ ನಿರ್ದೇಶನದ ‘ವಿಲನ್’ ಸಿನಿಮಾ ಸದ್ಯದಲ್ಲೇ ಕಿರುತೆರೆಯಲ್ಲಿ ಮೂಡಿಬರಲಿದೆ. ಸದ್ಯದಲ್ಲೇ ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ವಿಲನ್ ವೀಕ್ಷಿಸಬಹುದು ಎಂದು ಈಗಾಗಲೇ ಪ್ರೋಮೋ ಕೊಟ್ಟಿದೆ.
 
ಆದರೆ ಜೀ ಕನ್ನಡ ಈ ರೀತಿ ಪ್ರೋಮೋ ಕೊಟ್ಟ ಬೆನ್ನಲ್ಲೇ ಅಭಿಮಾನಿಗಳು ಜೋಗಿ ಪ್ರೇಮ್ ಮತ್ತು ವಿಲನ್ ಸಿನಿಮಾವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಪ್ರೇಮ್ ಬಿಲ್ಡಪ್ ಕೊಟ್ಟಷ್ಟು ಸಿನಿಮಾ ಚೆನ್ನಾಗಿರಲಿಲ್ಲ ಎಂದು ಪ್ರೇಕ್ಷಕರು ಅಂದೇ ಟೀಕಿಸಿದ್ದರು. ಇದೀಗ ಕಿರುತೆರೆಯಲ್ಲಿ ಮೂಡಿಬರುತ್ತಿರುವುದಕ್ಕೆ ಥಿಯೇಟರ್ ನಲ್ಲೇ ಈ ಸಿನಿಮಾ ನೋಡಕ್ಕಾಗಲಿಲ್ಲ, ಇನ್ನು, ಮನೆಯಲ್ಲೂ  ನೋಡಬೇಕಾ ಎಂದು ಅಭಿಮಾನಿಗಳು ಲೇವಡಿ ಮಾಡುತ್ತಿದ್ದಾರೆ.
 
ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಜತೆಯಾಗಿ ನಟಿಸಿದ್ದ ಸಿನಿಮಾ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಬರುತ್ತಿದೆ. ಆದರೆ ಯಾವಾಗ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಕೆಲವರು ಪ್ರೇಮ್ ಗೆ ಸಿನಿಮಾ ಬಗ್ಗೆ ಲೇವಡಿ ಮಾಡಿದ್ದರೆ ಇನ್ನು ಕೆಲವರು ಪರವಾಗಿ ಮಾತನಾಡಿದ್ದಾರೆ. ಪ್ರೇಮ್ ಸಿನಿಮಾ ಹಾಡುಗಳು ಸಖತ್ತಾಗಿರುತ್ತದೆ. ಬೇರೆ ಕೆಲವು ಸಿನಿಮಾಗೆ ಹೋಲಿಸಿದರೆ  ಈ ಸಿನಿಮಾ ಎಷ್ಟೋ ಬೆಟರ್ ಎಂದು ಪ್ರೇಮ್ ಪರವಾಗಿ ಕಾಮೆಂಟ್ ಮಾಡಿದವರೂ ಇದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :