ಬಾಲಿವುಡ್‌ನ ಖ್ಯಾತ ನಟಿ ಇನ್ನಿಲ್ಲ

ಮುಂಬೈ| Jagadeesh| Last Modified ಬುಧವಾರ, 29 ಜುಲೈ 2020 (22:24 IST)
ಬಾಲಿವುಡ್ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಬಾಲಿವುಡ್‌ನ ಖ್ಯಾತ ನಟಿಯ ಸಾವಿನ ಸುದ್ದಿ ಅಭಿಮಾನಿಗಳಲ್ಲಿ ನೋವುಂಟು ಮಾಡಿದೆ. 

50 ಮತ್ತು 60 ರ ದಶಕಗಳಲ್ಲಿ ಜನಪ್ರಿಯ ನಟಿಯಾಗಿದ್ದ ಕುಂಕುಮ್ ವಿಧಿವಶರಾಗಿದ್ದಾರೆ. ಕಿಶೋರ್ ಕುಮಾರ್ ಮತ್ತು ಗುರುದತ್ ಅವರ ಚಿತ್ರಗಳಲ್ಲಿ ನಟಿಸಿದ್ದ ಕುಂಕುಮ್ ಹೆಸರುವಾಸಿಯಾಗಿದ್ದರು. ಇವರು ಹೆಚ್ಚು ಪೌರಾಣಿಕ ಕಥೆಗಳಿಗೆ ಜೀವ ತುಂಬಿದ್ದರು.

ಬಿಹಾರದಲ್ಲಿ ಜೈಬುನ್ನಿಸ್ಸಾದಲ್ಲಿ ಜನಿಸಿದ ಹಿರಿಯ ನಟಿ, ತಮ್ಮ ವೃತ್ತಿಜೀವನದಲ್ಲಿ 115 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಮಿಸ್ಟರ್ ಎಕ್ಸ್ ಇನ್ ಬಾಂಬೆ (1964), ಮದರ್ ಇಂಡಿಯಾ (1957),  ಸನ್ ಆಫ್ ಇಂಡಿಯಾ (1962), ಕೊಹಿನೂರ್ (1960), ಉಜಲಾ, ನಯಾ ದೌರ್, ಶ್ರೀಮನ್ ಫುಂಟೂಶ್, ಏಕ್ ಸಪೇರಾ ಏಕ್ ಲುಟೆರಾ, ಗಂಗಾ ಕಿ ಲಹರೆನ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.


ಇದರಲ್ಲಿ ಇನ್ನಷ್ಟು ಓದಿ :