ಬಿಗ್ ಬಾಸ್ ಗೆ ಕೇಳಿಬರ್ತಿದೆ ಈ ನಟನ ಹೆಸರು

ಬೆಂಗಳೂರು| Krishnaveni K| Last Modified ಭಾನುವಾರ, 21 ಫೆಬ್ರವರಿ 2021 (09:20 IST)
ಬೆಂಗಳೂರು: ರಿಯಾಲಿಟಿ ಶೋನ 8 ನೇ ಆವೃತ್ತಿ ಆರಂಭವಾಗಲು ಸರಿಯಾಗಿ ಏಳು ದಿನ ಬಾಕಿಯಿದೆ. ಮುಂದಿನ ವಾರ ಆರಂಭವಾಗಲಿರುವ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳ ಬಗ್ಗೆ ಈಗಾಗಲೇ ಹಲವು ಊಹಾಪೋಹಗಳು ಹಬ್ಬಿವೆ.

 
ಇದೀಗ ಹೊಸದಾಗಿ ಕನ್ನಡದಲ್ಲಿ ನಟಿಸಿ ಬಾಲಿವುಡ್ ಗೆ ತೆರಳಿದ ನಟ ಕಿರಣ್ ಶ್ರೀನಿವಾಸ್ ಹೆಸರು ಕೇಳಿಬರುತ್ತಿದೆ. ಹಾಗೇ ಸುಮ್ಮನೆ, ನಿರುತ್ತರ ಮುಂತಾದ ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ನಟಿಸಿದ ಕಿರಣ್ ಹಿರಿಯ ನಟ ಸಿಹಿ ಕಹಿ ಚಂದ್ರು ಅವರ ಅಳಿಯ. ಅವರನ್ನು ಈಗಾಗಲೇ ವಾಹಿನಿ ಸಂಪರ್ಕಿಸಿದೆ ಎನ್ನಲಾಗಿದೆ. ಆದರೆ ಅವರು ಸ್ಪರ್ಧಿಸುತ್ತಾರೋ ಇಲ್ಲವೋ ಎಂದು ತಿಳಿಯಲು ಮುಂದಿನವಾರದವರೆಗೂ ಕಾಯಲೇಬೇಕು.
ಇದರಲ್ಲಿ ಇನ್ನಷ್ಟು ಓದಿ :