ಲವ್ ಮಾಕ್ ಟೈಲ್ ತೆಲುಗು ರಿಮೇಕ್ ನಲ್ಲಿ ಈ ಖ್ಯಾತ ನಟಿ

ಬೆಂಗಳೂರು| Krishnaveni K| Last Modified ಬುಧವಾರ, 15 ಜುಲೈ 2020 (13:29 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿದ್ದ ಲವ್ ಮಾಕ್ ಟೈಲ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಈ ಕನ್ನಡ ಸಿನಿಮಾದ ಎರಡನೇ ಭಾಗವೂ ಮೂಡಿಬರುತ್ತಿದೆ. ಇದೀಗ ಈ ಸಿನಿಮಾ ತೆಲುಗಿಗೆ ರಿಮೇಕ್ ಆಗಲಿದ್ದು,  ಖ್ಯಾತ ನಟಿ ತಮನ್ನಾ ಮಿಲನಾ ನಾಗರಾಜ್ ಮಾಡಿದ್ದ ಪಾತ್ರ ಮಾಡಲಿದ್ದಾರೆ.
 > ತೆಲುಗಿನಲ್ಲಿ ಕನ್ನಡ ನಿರ್ಮಾಪಕ, ನಿರ್ದೇಶಕ ನಾಗಶೇಖರ್ ಸಿನಿಮಾ ನಿರ್ದೇಶಿಸಲಿದ್ದು, ಸೆಪ್ಟೆಂಬರ್ ನಲ್ಲಿ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.>   ಈ ಸಿನಿಮಾದಲ್ಲಿ ನಾಯಕನ ಪಾತ್ರಕ್ಕಾಗಿ ಸತ್ಯದೇವ್ ಮತ್ತು ನಾಯಕಿ ಪಾತ್ರಕ್ಕಾಗಿ ಮಿಲ್ಕಿ ಬ್ಯೂಟಿ ತಮನ್ನಾರನ್ನು ಸಂಪರ್ಕಿಸಲಾಗಿದೆ ಎನ್ನಲಾಗಿದೆ. ಆದರೆ ಇಬ್ಬರೂ ಅಂತಿಮ ಒಪ್ಪಿಗೆ ನೀಡಬೇಕಿದೆಯಷ್ಟೇ.ಇದರಲ್ಲಿ ಇನ್ನಷ್ಟು ಓದಿ :