ಉಪೇಂದ್ರ ಕಬ್ಜ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾವೇ ಸ್ಪೂರ್ತಿಯಂತೆ!

ಬೆಂಗಳೂರು| Krishnaveni K| Last Modified ಮಂಗಳವಾರ, 19 ನವೆಂಬರ್ 2019 (09:28 IST)
ಬೆಂಗಳೂರು: ರಿಯಲ್ ಸ್ಟಾರ್ ನಾಯಕರಾಗಿ ನಟಿಸಲಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ಗೆ ನಿನ್ನೆ ಮುಹೂರ್ತ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ.

 
ಮುಹೂರ್ತ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಒಟ್ಟು ಏಳು ಭಾಷೆಗಳಲ್ಲಿ ತಯಾರಾಗಲಿರುವ ಅಂಡರ್ ವಲ್ಡ್ ಕತೆಯಿರುವ ಸಿನಿಮಾ ಇದಾಗಲಿದೆ.
 
ಈ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಆರ್ ಚಂದ್ರು ‘ನಮ್ಮ ಕನ್ನಡ ಸಿನಿಮಾವೂ 100 ಕೋಟಿ ರೂ.ಬಜೆಟ್ ಹಾಕುವ ಸಾಮರ್ಥ್ಯವಿದೆ ಎಂದು ಈಗಾಗಲೇ ಕೆಲವು ಸಿನಿಮಾಗಳು ಸ್ಪೂರ್ತಿ ನೀಡಿವೆ. ಅದರಲ್ಲೂ ಕೆಜಿಎಫ್ ಸಿನಿಮಾ ನಮಗೆ ಸ್ಪೂರ್ತಿ ಎಂದರೂ ತಪ್ಪಲ್ಲ. ಉಪೇಂದ್ರ ಅವರಿಗೆ ಬೇರೆ ಭಾಷೆಗಳಲ್ಲೂ ಅಭಿಮಾನಿಗಳಿದ್ದಾರೆ. ಹೀಗಾಗಿ ಕನ್ನಡ ಮಾತ್ರವಲ್ಲದೆ ಏಳು ಭಾಷೆಗಳಲ್ಲಿ ಸಿನಿಮಾ ತಯಾರು ಮಾಡುತ್ತಿದ್ದೇವೆ. ಬಹುಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿರುವ ಕಾರಣ ಸಹಜವಾಗಿಯೇ ಅದ್ಧೂರಿ ವೆಚ್ಚದ ಸಿನಿಮಾವಾಗಲಿದೆ. ತಾಂತ್ರಿಕತೆ ಬಳಸಿ ಈ ಸಿನಿಮಾವನ್ನು ಅದ್ಭುತವಾಗಿ ತಯಾರು ಮಾಡಲಿದ್ದೇವೆ. ಮುಂದೆ ನೀವೇ ನೋಡಬಹುದು’ ಎಂದು ಚಂದ್ರು ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :