ಸದ್ಯಕ್ಕೆ ಡೈರೆಕ್ಷನ್ ಮಾಡಲ್ವಂತೆ ಉಪೇಂದ್ರ

ಬೆಂಗಳೂರು| Krishnaveni K| Last Modified ಮಂಗಳವಾರ, 14 ಸೆಪ್ಟಂಬರ್ 2021 (09:03 IST)
ಬೆಂಗಳೂರು: ಎಲ್ಲಾ ಸರಿ ಹೋಗಿದ್ದರೆ ರಿಯಲ್ ಸ್ಟಾರ್ ಈ ವರ್ಷ ಮತ್ತೆ ನಿರ್ದೇಶನಕ್ಕಿಳಿಯಬೇಕಿತ್ತು. ಆದರೆ ಅದು ಸಾಧ‍್ಯವಾಗಿಲ್ಲ.
 > ಕೊರೋನಾದಿಂದಾಗಿ ಉಪೇಂದ್ರ ನಿರ್ದೇಶನದ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಇನ್ನು, ಸದ್ಯಕ್ಕಂತೂ ಡೈರೆಕ್ಷನ್ ಮಾಡಲ್ಲ ಎಂದು ಉಪೇಂದ್ರ ಹೇಳಿದ್ದಾರೆ.>   ಎರಡು ಬಾರಿ ಈಗಾಗಲೇ ತಮ್ಮ ನಿರ್ದೇಶನದ ಸಿನಿಮಾ ಲಾಂಚ್ ಮಾಡಲು ಉಪೇಂದ್ರ ತಯಾರಿ ನಡೆಸಿದ್ದರಂತೆ. ಆದರೆ ಎರಡೆರಡು ಬಾರಿ ಲಾಕ್ ಡೌನ್ ಆದ ಕಾರಣ ಅವರ ಯೋಜನೆ ತಲೆಕೆಳಗಾಗಿದೆ. ಆದರೆ ಇನ್ನು ಸದ್ಯಕ್ಕಂತೂ ನಿರ್ದೇಶನಕ್ಕಿಳಿಯಲ್ಲ. ಕೊವಿಡ್ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದ ಮೇಲಷ್ಟೇ ಸಿನಿಮಾ ನಿರ್ದೇಶನ ಮಾಡುವುದಾಗಿ ಉಪೇಂದ್ರ ಹೇಳಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :