ಹರ್ಷಿಕಾ ಬಿರಿಯಾನಿ ಮಾಡಿದ್ದು ಯಾವ ಖುಷಿಗೆ ಗೊತ್ತಾ?

Navya K M| Last Updated: ಬುಧವಾರ, 29 ಜೂನ್ 2016 (09:08 IST)
ಸಿನಿಮಾ ತಾರೆಯರು ತಮ್ಮ ಸಿನಿಮಾಗಳು ಸಕಸ್ಸ್ ಆದ್ರೆ ಆ ಖುಷಿಯನ್ನು ಒಂದೊಂದು ರೀತಿಯಲ್ಲಿ ಸೆಲಬ್ರೇಟ್ ಮಾಡ್ತಾರೆ. ಕೆಲವರು ಅದಕ್ಕಾಗಿ ಭರ್ಜರಿ ಪಾರ್ಟಿ ಇಟ್ಕೊಂಡ್ರೆ ಇನ್ನೂ ಕೆಲವರು ಮನೆ ಮಂದಿಯೊಂದಿಗೆ ಎಂಜಾಯ್ ಮಾಡ್ತಾರೆ. ಆದ್ರೆ ನಟಿ ಹರ್ಷಿಕಾ ಪೂಣಚ್ಚ ಮಾತ್ರ ಇವರೆಲ್ಲರಿಗಿಂತ ಭಿನ್ನ.
ಅಂದ್ಹಾಗೆ ಹರ್ಷಿಕಾ ಪೂಣಚ್ಚ ಅಭಿನಯದ ಬೀಟ್ ಸಿನಿಮಾ ಉತ್ತಮ ಯಶಸ್ಸು ಕಂಡಿದೆ. ಹಾಗಾಗಿ ಅದರ ಖುಷಿಯನ್ನು ಹರ್ಷಿಕಾ ಪೂಣಚ್ಚ ಅವರು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಅದು ಮಟನ್ ಬಿರಿಯಾನಿ ಮಾಡೋ ಮೂಲಕ. ಸಿನಿಮಾ ಸಕ್ಸಸ್ ಕಂಡ ಖುಷಿಯಲ್ಲಿರುವ ಹರ್ಷಿಕಾ ಅದಕ್ಕಾಗಿ ಮನೆ ಮಂದಿಗೆಲ್ಲಾ ಭರ್ಜರಿಯಾಗಿ ಮಟನ್ ಬಿರಿಯಾನಿ ಮಾಡಿ ತಿನ್ನಿಸಿದ್ದಾರಂತೆ. ಅಲ್ಲದೇ ಹರ್ಷಿಕಾ ಮಾಡಿದ ಮಟನ್ ಬಿರಿಯಾನಿಯನ್ನು ಮನೆ ಮಂದಿಯೆಲ್ಲಾ ಚಪ್ಪರಿಸಿಕೊಂಡು ತಿಂದ್ರಂತೆ.
 
ಇನ್ನು ಹರ್ಷಿಕಾ ಅವರು ಅಭಿಮಾನಿಗಳಿಗೂ ಬೇಜಾರು ಆಗ್ಬಾರದು ಅಂತಾ ಅವರಿಗೂ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ಮುಂದೊಂದು ದಿನ ಮನೆ ಮಂದಿಗೆ ಭರ್ಜರಿಯಾಗಿ ಮಟನ್ ಬಿರಿಯಾನಿ ನೀಡ್ತೇನೆ ಅಂತಾ ಹರ್ಷಿಕಾ ಹೇಳಿದ್ದಾರೆ. ಹಾಗಾಗಿ ಅಭಿಮಾನಿಗಳು ಕೂಡ ಈ ದಿನ ಯಾವಾಗ ಬರುತ್ತೆ ಅಂತಾ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :