ಜೀ ಕುಟುಂಬ ಅವಾರ್ಡ್ಸ್ ಗೆ ಶುರುವಾಗಿದೆ ಕ್ಷಣಗಣನೆ

ಬೆಂಗಳೂರು| Krishnaveni K| Last Modified ಸೋಮವಾರ, 23 ಸೆಪ್ಟಂಬರ್ 2019 (08:57 IST)
ಬೆಂಗಳೂರು: ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಈ ವರ್ಷದ ಅನುಬಂಧ ಅವಾರ್ಡ್ಸ್ ಮಾಡಿ ಮುಗಿಸಿದೆ. ಇದೀಗ ಸರದಿ.

 
ಜೀ ಕನ್ನಡವೂ ಸದ್ಯದಲ್ಲೇ ಈ ಸಾಲಿನ ಜೀ ಕುಟುಂಬ  ಅವಾರ್ಡ್ಸ್ ಸಮಾರಂಭ ಏರ್ಪಡಿಸುತ್ತಿದೆ. ಇದಕ್ಕೆ ಈಗಾಗಲೇ ತಯಾರಿಯನ್ನೂ ಪ್ರಾರಂಭಿಸಿದೆ.
 
ಸದ್ಯದಲ್ಲೇ ತಮ್ಮ ನೆಚ್ಚಿನ ಧಾರವಾಹಿ, ರಿಯಾಲಿಟಿ ಶೋ, ತಾರೆಗಳನ್ನು ಆಯ್ಕೆ ಮಾಡಲು ಜೀ ಕುಟುಂಬ ವೀಕ್ಷಕರಿಗೆ ವೋಟಿಂಗ್ ಅವಕಾಶ ಕಲ್ಪಿಸಲಿದೆ. ಟಿಆರ್ ಪಿಯಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆಯುತ್ತಿರುವ ನಾಲ್ಕು ಧಾರವಾಹಿಗಳು ಜೀ ಕನ್ನಡದಲ್ಲೇ ಪ್ರಸಾರವಾಗುತ್ತಿರುವುದರಿಂದ ಈ ಬಾರಿ ಪ್ರಶಸ್ತಿಗಾಗಿ ಪೈಪೋಟಿ ಜೋರಾಗಿಯೇ ನಡೆಯುವುದು ಖಂಡಿತಾ. ಜೀ ಕುಟುಂಬ ಅವಾರ್ಡ್ಸ್ ಯಾವಾಗ ಎನ್ನುವುದಕ್ಕೆ ಜೀ ಕನ್ನಡ ವಾಹಿನಿ ಸದ್ಯದಲ್ಲೇ ಉತ್ತರ ನೀಡಲಿದೆ.
ಇದರಲ್ಲಿ ಇನ್ನಷ್ಟು ಓದಿ :