ಆಧಾರ್ ಅಧ್ಯಕ್ಷ ಸ್ಥಾನಕ್ಕೆ ನಿಲೇಕಣಿ ರಾಜೀನಾಮೆಗೆ ನಿರ್ಧಾರ

ವೆಬ್‌ದುನಿಯಾ| Last Modified ಶುಕ್ರವಾರ, 21 ಫೆಬ್ರವರಿ 2014 (16:23 IST)
PR
PR
ಬೆಂಗಳೂರು: ನಂದನ್ ನಿಲೇಕಣಿ ಅವರು ಆಧಾರ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ನಂದನ್ ನಿಲೇಕಣಿ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಹೈಕಮಾಂಡ್ ಹಸಿರು ನಿಶಾನೆ ನೀಡಿರುವುದರಿಂದ ಅವರು ಆಧಾರ್ ಅಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ನಂದನ್ ನಿಲೇಕಣಿ ಅವರು ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸುವುದರ ವಿರುದ್ದ ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ಮುಖಂಡರ ಒಂದು ಗುಂಪು ಹೈಕಮಾಂಡ್‌ಗೆ ಪತ್ರ ಬರೆದು ಬೆಂಗಳೂರು ದಕ್ಷಿಣದಲ್ಲಿ ನಿಲೇಕಣಿ ಅವರನ್ನು ಕಣಕ್ಕಿಳಿಸುವುದು ಬೇಡವೆಂದು ಹೇಳಿದ್ದರು.


ಇದರಲ್ಲಿ ಇನ್ನಷ್ಟು ಓದಿ :