ಗುಲ್ಬರ್ಗಾದಲ್ಲಿ ಕಾಂಗ್ರೆಸ್ ರಣಕಹಳೆ: ಸೋನಿಯಾರಿಂದ ಇಎಸ್‌ಐ ಆಸ್ಪತ್ರೆ ಉದ್ಘಾಟನೆ

ಗುಲ್ಬರ್ಗ| ವೆಬ್‌ದುನಿಯಾ| Last Modified ಶನಿವಾರ, 1 ಫೆಬ್ರವರಿ 2014 (16:26 IST)
PR
PR
ಗುಲ್ಬರ್ಗದಲ್ಲಿ 1400 ಕೋಟಿ ವೆಚ್ಚದ ಇಎಸ್‌ಐ ಆಸ್ಪತ್ರೆ ಸಂಕೀರ್ಣವನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಲೋಕಾರ್ಪಣೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಿಂದ ಸೋನಿಯಾಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಲೋಕಸಭೆ ಚುನಾವಣೆ ಪ್ರಚಾರಕ್ಕೆ ಕೂಡ ಸೋನಿಯಾ ಚಾಲನೆ ನೀಡಿದರು. ಸಮಾವೇಶದಲ್ಲಿ ಸೋನಿಯಾ ಭಾಷಣ ಮಾಡುತ್ತಾ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಂದಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. 371ನೇ ಕಲಂ ತಿದ್ದುಪಡಿಯಿಂದ ಹೈ.ಕ.ಭಾಗದ ಜನತೆಗೆ ಅನುಕೂಲವಾಗಿದೆ ಎಂದರು. ದೇಶದಲ್ಲಿ ಮಹಿಳೆಯರ ರಕ್ಷಣೆ, ಅಲ್ಪಸಂಖ್ಯಾತರು, ಹಿಂದುಳಿದವರ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಸೋನಿಯಾ ಹೇಳಿದರು. ಬಿಜೆಪಿಗೆ ಶಾಂತಿ ಕದಡಲು ಅವಕಾಶ ನೀಡಬೇಡಿ ಎಂದು ಸೋನಿಯಾ ಮನವಿ ಮಾಡಿಕೊಂಡರು. ದೇಶದ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವೆಂದು ಸೋನಿಯಾ ಹೇಳಿದರು.


ಇದರಲ್ಲಿ ಇನ್ನಷ್ಟು ಓದಿ :