ಮೋದಿ ಹೆಸರಲ್ಲಿ ಹಣ ವಸೂಲಿ ಮಾಡ್ತಾರೆ: ಲಿಂಗರಾಜ್, ಸಾಬೀತು ಮಾಡಲಿ: ಮುತಾಲಿಕ್

ವೆಬ್‌ದುನಿಯಾ| Last Modified ಶನಿವಾರ, 9 ನವೆಂಬರ್ 2013 (16:50 IST)
PR
PR
ಬೆಂಗಳೂರು: ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ವಿರುದ್ಧ ಹಣ ವಸೂಲಿ ಆರೋಪ ಕೇಳಿಬರುತ್ತಿದೆ. ಮುತಾಲಿಕ್ ಅಭಿಮಾನಿ ಬ್ರಿಗೇಡ್ ಹೆಸರಲ್ಲಿ ಸ್ಟಿಕರ್‌ನಲ್ಲಿ ಮೋದಿ ಹೆಸರು ಬಳಸಿಕೊಂಡು ಅಂಗಡಿಗಳಿಂದ, ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಈ ಆರೋಪ ಮಾಡಿದ್ದು, ಮೋದಿ ಹೆಸರಿನಲ್ಲಿ ದುಡ್ಡು ವಸೂಲಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಸಂದರ್ಭ ಬಂದಾಗ ಇದನ್ನು ಸಾಬೀತು ಮಾಡ್ತೇನೆ ಎಂದೂ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :